Curry leaves Benefits: ಬುಡದಿಂದ ತಲೆವರೆಗೆ ಅದ್ಭುತ ಪ್ರಯೋಜನ ನೀಡುತ್ತೆ ಕರಿಬೇವು
ಕರಿಬೇವಿನ ಸೊಪ್ಪನ್ನು ನೇರವಾಗಿಯೂ ತಿನ್ನಬಹುದು. ಕರಿಬೇವಿನ ಎಲೆಯಲ್ಲಿ ವಿಟಮಿನ್ ಬಿ1, ಬಿ3, ಬಿ9, ಸಿ. ಇದಲ್ಲದೆ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕವು ಇದರಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಕರಿಬೇವಿನ ಎಲೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಕೂದಲು ಕಪ್ಪಾಗಿ, ಉದ್ದವಾಗಿ ಮತ್ತು ದಪ್ಪಗಾಗಲು ಪ್ರಾರಂಭವಾಗುತ್ತದೆ. ಇಷ್ಟೇ ಅಲ್ಲ, ತಲೆಹೊಟ್ಟು ಸಮಸ್ಯೆಯೂ ನಿವಾರಣೆ ಆಗುತ್ತದೆ.
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರುತ್ತದೆ.
ಕರಿಬೇವಿನ ಎಲೆಯ ಚಹಾವನ್ನು ತಯಾರಿಸಿ ಬಳಸುವುದರಿಂದ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕಾಗಿ, ಮೊದಲು ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದರಲ್ಲಿ ನಿಂಬೆ ರಸ ಹಿಂಡಿ ಮತ್ತು ಸಕ್ಕರೆ ಮಿಶ್ರಣ ಮಾಡಿ. ಈ ರೀತಿ ಟೀ ಮಾಡಿ ಒಂದು ವಾರ ಕುಡಿಯಿರಿ. ಈ ಟೀ ನಿಮ್ಮ ಕೂದಲನ್ನು ಉದ್ದವಾಗಿ, ದಟ್ಟವಾಗಿ ಮಾಡುತ್ತದೆ. ಜೊತೆಗೆ, ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ.
ಮುಖಕ್ಕೆ ನೈಸರ್ಗಿಕ ಕಾಂತಿಯನ್ನು ತರಲು ಕರಿಬೇವಿನ ಎಲೆಗಳನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಕರಿಬೇವಿನ ಎಲೆಗಳು ಮುಖದ ಕಾಂತಿ ಮತ್ತು ಮೈಬಣ್ಣವನ್ನು ಹೆಚ್ಚಿಸುತ್ತವೆ. ನೀವು ಇದನ್ನು ಫೇಸ್ ಪ್ಯಾಕ್ ಆಗಿಯೂ ಬಳಸಬಹುದು
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.