ಈ ಮರದ ಎಲೆಯನ್ನು ಅರೆದು ಹಚ್ಚಿದರೆ ಕೇವಲ 20 ನಿಮಿಷದಲ್ಲಿ ಬಿಳಿಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ!
ಸೀತಾಫಲವು ಜೀರ್ಣಕ್ರಿಯೆ, ಕಣ್ಣುಗಳು ಮತ್ತು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ಇದಷ್ಟೇ ಅಲ್ಲ, ಸೀತಾಫಲದ ಎಲೆಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ಗುಣಲಕ್ಷಣಗಳು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಸೀತಾಫಲದ ಎಲೆಗಳಿಂದ ನಿಮ್ಮ ತ್ವಚೆ ಮತ್ತು ಕೂದಲನ್ನು ಹೇಗೆ ಆರೋಗ್ಯಕರವಾಗಿ ಇಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಸೀತಾಫಲ ಎಲೆಗಳು ವಿಟಮಿನ್ ಎ ಮತ್ತು ಸಿ ಸೇರಿದಂತೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ ನಿಮ್ಮ ಚರ್ಮ ಮತ್ತು ಕೂದಲನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೀತಾಫಲ ಎಲೆಗಳು ನೈಸರ್ಗಿಕ ಶುದ್ಧೀಕರಣ ಗುಣಗಳನ್ನು ಹೊಂದಿವೆ. ಈ ಎಲೆಗಳ ಪೇಸ್ಟ್ ಅಥವಾ ನೀರು ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತವೆ. ಜೊತೆಗೆ ಕೂದಲಿಗೆ ಆಳವಾದ ಪೋಷಣೆಯನ್ನು ಒದಗಿಸುತ್ತದೆ.
ಶಾಖ ಮತ್ತು ಸೂರ್ಯನ ಬೆಳಕಿನಿಂದ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ತ್ವಚೆಯನ್ನು ಹೈಡ್ರೇಟ್ ಮಾಡಲು ಸೀತಾಫಲದ ಎಲೆಗಳನ್ನು ಬಳಸಬಹುದು. ಈ ಪ್ಯಾಕ್ ತ್ವಚೆಯನ್ನು ಹೈಡ್ರೇಟ್ ಮಾಡಿ ಹೊಳೆಯುವಂತೆ ಮಾಡುತ್ತದೆ.
ಸೀತಾಫಲದ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಕೂದಲಿನ ಬೇರುಗಳಿಂದ ತಲೆಹೊಟ್ಟು ತೆಗೆದುಹಾಕಲು ಕೂಡ ಇದು ಬೆಸ್ಟ್ ಮನೆಮದ್ದು.
ಸೀತಾಫಲ ಎಲೆಗಳನ್ನು ರುಬ್ಬಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರು ಮತ್ತು ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಪೇಸ್ಟ್ ತರ ಸಿದ್ಧಪಡಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಈ ವಿಧಾನವನ್ನು ತಿಂಗಳಿಗೆ 3 ರಿಂದ 4 ಬಾರಿ ಅನುಸರಿಸಿದರೆ ಉತ್ತಮ ಪ್ರಯೋಜನ ಸಿಗಲಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)