ಈ ಎರಡು ದಿನ ಕೂದಲನ್ನು ಯಾವ ಕಾರಣಕ್ಕೂ ಕತ್ತರಿಸಬೇಡಿ.. ಮನೆಯಲ್ಲಿ ದಾರಿದ್ರ್ಯ ತಾಂಡವವಾಡುವುದು, ಸಿರಿವಂತನೂ ಭಿಕ್ಷುಕನಾಗುವ!

Fri, 13 Sep 2024-10:52 am,

ಧಾರ್ಮಿಕ ಗ್ರಂಥಗಳಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಅನೇಕ ಜನರು ಅನುಸರಿಸುತ್ತಾರೆ. ಈ ನಿಯಮಗಳನ್ನು ಪಾಲಿಸಿದರೆ ಜೀವನ ಸುಖಮಯವಾಗಿರುತ್ತದೆ. ಕೂದಲು ಕತ್ತರಿಸುವುದಕ್ಕೆ ಕೆಲವು ನಿಯಮಗಳನ್ನು ಹೇಳಲಾಗಿದೆ.

ಮಂಗಳವಾರ ಮತ್ತು ಶನಿವಾರ ಕೂದಲನ್ನು ಕತ್ತರಿಸಿದರೆ ಜೀವನದಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ ಎಂದು ನಂಬಲಾಗಿದೆ. 

ಮಂಗಳವಾರ ಮತ್ತು ಶನಿವಾರವನ್ನು ಹನುಮಂತನ ದಿನವೆಂದು ಪರಿಗಣಿಸಲಾಗಿದೆ. ಈ ಎರಡು ದಿನ ಕೂದಲನ್ನು ಕತ್ತರಿಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ವಾರದ ಪ್ರತಿ ದಿನವೂ ಯಾವುದಾದರೊಂದು ದೇವರು, ದೇವತೆ ಅಥವಾ ಗ್ರಹದೊಂದಿಗೆ ಸಂಬಂಧಿಸಿದೆ. ನಿಮ್ಮ ಕೂದಲು ಅಥವಾ ಉಗುರುಗಳನ್ನು ಕತ್ತರಿಸುವುದು ಜೀವನದ ಆರ್ಥಿಕ ಪರಿಸ್ಥಿತಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವಾರವನ್ನು ಮಂಗಳನ ಜನ್ಮದಿನವೆಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಕಾರ್ಯಗಳಿಗೆ ಇಂದು ಸೂಕ್ತವಾಗಿದೆ ಎಂದರ್ಥ. 

ಕೂದಲು ಶನಿಯೊಂದಿಗೆ ಸಂಬಂಧ ಹೊಂದಿದೆ. ಮಂಗಳವಾರ ಕೂದಲು ಕತ್ತರಿಸಿದರೆ ಜೀವನದಲ್ಲಿ ಸಿರಿವಂತಿಕೆ ನಶಿಸಿ ಹೋಗುತ್ತದೆ. ದರಿದ್ರ ವಕ್ಕರಿಸುತ್ತದೆ. ಇಲ್ಲಸಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಮಂಗಳವಾರದಂದು ಕೂದಲನ್ನು ಕತ್ತರಿಸಿದರೆ ಸಾಲಬಾಧೆ ಎಸುರಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿಯೂ ಹದಗೆಡುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳನ್ನೂ ಉಂಟುಮಾಡುತ್ತದೆ. ಅದಕ್ಕಾಗಿಯೇ ಮಂಗಳವಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು.

ಶನಿವಾರದಂದು ಕೂದಲನ್ನು ಕತ್ತರಿಸಿದರೆ ಶನಿದೇವನು ಕೋಪಗೊಳ್ಳುತ್ತಾನೆ. ಇದರಿಂದ ಜೀವನದಲ್ಲಿ ಮಾಡುವ ಕೆಲಸಗಳಲ್ಲಿ ವಿಫಲರಾಗುತ್ತೀರಿ. ಅಪಮಾನಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಶನಿವಾರ ಕೂದಲು ಕತ್ತರಿಸಬಾರದು.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link