Asani ಚಂಡಮಾರುತದ ಆತಂಕ, Andaman Nicobarನಲ್ಲಿ ಹೈ ಅಲರ್ಟ್ ಘೋಷಣೆ!
1. ಯಾವ ದಿಕ್ಕಿನತ್ತ ಸಾಗುತ್ತಿದೆ ಚಂಡಮಾರುತ? - ಈ ಚಂಡಮಾರುತವು ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಚಲಿಸಬಹುದು ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಶ್ರೀಲಂಕಾ ಹವಾಮಾನ ಇಲಾಖೆ ಈ ಚಂಡಮಾರುತಕ್ಕೆ ಅಸನಿ (Asani) ಎಂದು ಹೆಸರಿಸಿದೆ. ಇದಕ್ಕೂ ಮುನ್ನ ಕೇಂದ್ರ ಗೃಹ ಕಾರ್ಯದರ್ಶಿಗಳು ಚಂಡಮಾರುತದಿಂದ ಉದ್ಭವಿಸುವ ಸಂಭಾವ್ಯ ಪರಿಸ್ಥಿತಿ ಎದುರಿಸಲು ಉನ್ನತ ಮಟ್ಟದ ಸಭೆ ಕರೆದಿದ್ದರು.
2. ಹವಾಮಾನದಲ್ಲಿ ಬದಲಾವಣೆ - ಈ ಚಂಡಮಾರುತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕಡೆಗೆ ಚಲಿಸುವ ಮೊದಲು ಕಡಿಮೆ ಒತ್ತಡದ ಪ್ರದೇಶವಾಗಿ ರೂಪಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 21 ರಂದು ಬೀಸುವ ಪ್ರಬಲ ಗಾಳಿ, ಸೈಕ್ಲೋನಿಕ್ ಸ್ಟಾರ್ಮ್ ಅಂದರೆ ಚಂಡಮಾರುತವಾಗಿ ಬದಲಾಗಬಹುದು ಎಂದು IMD ಮುನ್ಸೂಚನೆ ನೀಡಿದೆ. ಇದು ಮಾರ್ಚ್ 22 ರವರೆಗೆ ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ.
3. ಪರಿಸ್ಥಿತಿ ನಿಯಂತ್ರಿಸಲು ಸಜ್ಜುಗೊಂಡ ಸಶಸ್ತ್ರ ಪಡೆಗಳು- ಶ್ರೀಲಂಕಾ ಈ ಚಂಡಮಾರುತಕ್ಕೆ ಅಸನಿ ಎಂದು ಹೆಸರಿಸಿದೆ. ಕೇಂದ್ರ ಗೃಹ ಸಚಿವಾಲಯ ಮೂರು ಸಶಸ್ತ್ರ ಪಡೆಗಳಿಗೆ (Armed Forces) ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಕೇಂದ್ರ ಗೃಹ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ನ (Andaman Nicobar) ಆಡಳಿತ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವಾಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.
4. NDRF ಜೊತೆಗೆ ಹಲವು ರಕ್ಷಣಾ ತುಕಡಿಗಳು ಸಜ್ಜು - ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ಚಂಡಮಾರುತದ ಎಚ್ಚರಿಕೆಯ ನಂತರ, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ (Andaman And Nicobar) NDRF ಜೊತೆಗೆ ಇತರ ರಕ್ಷಣಾ ತಂಡಗಳನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ. ಚಂಡಮಾರುತದಿಂದಾಗಿ, ಮಾರ್ಚ್ 21 ರಂದು ಮಧ್ಯ ಬಂಗಾಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
5. ಹವಾಮಾನ ಇಲಾಖೆಯ ಅಂದಾಜು ಏನು? - ಮಾರ್ಚ್ 22 ರ ಬೆಳಗ್ಗೆ ಬಾಂಗ್ಲಾದೇಶ-ಉತ್ತರ ಮ್ಯಾನ್ಮಾರ್ ಕರಾವಳಿಯ ಬಳಿ ಚಂಡಮಾರುತವು ಭೂಸ್ಪರ್ಶಿಸುವ ನಿರೀಕ್ಷೆಯಿದೆ ಎಂದು IMD ಸೂಚನೆ ನೀಡಿದೆ. ಇದಕ್ಕೂ ಒಂದು ದಿನ ಮೊದಲು ಬಿಡುಗಡೆ ಮಾಡಲಾಗಿದ್ದ, IMD ಬುಲೆಟಿನ್ ನಲ್ಲಿ ಮಾರ್ಚ್ 23 ರಂದು ಚಂಡಮಾರುತ ಕರಾವಳಿಯನ್ನು ತಲುಪಬಹುದು ಎಂದು ಹೇಳಲಾಗಿತ್ತು. ಅಂದರೆ ಮಾರ್ಚ್ 20 ರ ವೇಳೆಗೆ ಬಿರುಗಾಳಿಯ ತೀವ್ರತೆ ಇನ್ನೂ ಹೆಚ್ಚಾಗಿ, ಮಾರ್ಚ್ 21 ರ ವೇಳೆಗೆ ಅದು ಚಂಡಮಾರುತದ ರೂಪ ಪಡೆದುಕೊಳ್ಳಬಹುದು ಎನ್ನಲಾಗಿತ್ತು.
6. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ - ಭಾರಿ ಮಳೆಯ ಜೊತೆಗೆ ರಾಜ್ಯದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಚಂಡಮಾರುತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಗೃಹ ಸಚಿವಾಲಯವು ಹೆಚ್ಚುವರಿ ರಕ್ಷಣಾ ತಂಡಗಳನ್ನು ಅಲರ್ಟ್‌ನಲ್ಲಿ ಇರಿಸಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.