D Gukesh Net Worth: ಚೆಸ್ ವಿಶ್ವ ಚಾಂಪಿಯನ್ಶಿಪ್ ಗೆದ್ದ ಡಿ.ಗುಕೆಶ್ ಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತೇ?
29 ಮೇ 2006 ರಂದು ಚೆನ್ನೈನಲ್ಲಿ ಜನಿಸಿದ ಡಿ ಗುಕೇಶ್ ತಮ್ಮ 7 ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಅಂತರಾಷ್ಟ್ರೀಯ ಚೆಸ್ ಆಟಗಾರ ಭಾಸ್ಕರ್ ನಾಗಯ್ಯ ಅವರಿಂದ ತರಬೇತಿ ಪಡೆದಿದ್ದರು. ಗುಕೇಶ್ ಅವರ ತಂದೆ ವೈದ್ಯರು ಮತ್ತು ತಾಯಿ ಮೈಕ್ರೋಬಯಾಲಜಿಸ್ಟ್.
ಮಾಧ್ಯಮ ವರದಿಗಳ ಪ್ರಕಾರ, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಕ್ಕಾಗಿ ಡಿ ಗುಕೇಶ್ 20.86 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ಡಿ ಗುಕೇಶ್ ಅವರ ನಿವ್ವಳ ಮೌಲ್ಯ 8.26 ಕೋಟಿ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ ಭಾರತದ ಪರ ವಿಶ್ವ ಚಾಂಪಿಯನ್ಶಿಪ್ ಪಟ್ಟವನ್ನು ಗೆದ್ದಿದ್ದರು.ಗುಕೇಶ್ 17 ನೇ ವಯಸ್ಸಿನಲ್ಲಿ FIDE ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನು ಗೆದ್ದರು.
ಡಿ ಗುಕೇಶ್‌ಗಿಂತ ಮೊದಲು, 1985 ರಲ್ಲಿ, ರಷ್ಯಾದ ಗ್ಯಾರಿ ಕಾಸ್ಪರೋವ್ 22 ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದರು. ಡಿ ಗುಕೇಶ್ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು 7.5-6.5 ರಿಂದ ಸೋಲಿಸಿದರು.
ಭಾರತದ ದೊಮ್ಮರಾಜು ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಮತ್ತು ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆ ಅವರದ್ದಾಗಿದೆ.ಇದಕ್ಕೂ ಮೊದಲು ವಿಶ್ವನಾಥ್ ಆನಂದ್ ಈ ಸಾಧನೆ ಮಾಡಿದ್ದರು.