Dhananjay Birthday: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಕೈಯಲ್ಲಿವೆ 7 ಚಿತ್ರಗಳು

Tue, 23 Aug 2022-2:16 pm,

ಜಯನಗರ 4th ಬ್ಲಾಕ್ ಶಾರ್ಟ್​ ಮೂವೀ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧನಂಜಯ್  ಇಂದು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಮಿಂಚಲು ಶುರು ಮಾಡಿದರು.

ಡಾಲಿ ಧನಂಜಯ್ ಇಂದು (ಆಗಸ್ಟ್ 23) 36ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಪುನೀತ್ ರಾಜ್​ಕುಮಾರ್ ನಿಧನ ಹಿನ್ನೆಲೆಯಲ್ಲಿ ಧನಂಜಯ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. 

ಸರಿ ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಲ್ಲಿರುವ ಡಾಲಿ ಧನಂಜಯ್‌ ಕೈಯಲ್ಲಿ ಇದೀಗ ಏಳಕ್ಕೂ ಹೆಚ್ಚು ಸಿನಿಮಾಗಳು ಇವೆ. 

2018ರಲ್ಲಿ ತೆರೆಗೆ ಬಂದ ಟಗರು ಚಿತ್ರದಲ್ಲಿ ಧನಂಜಯ್ ಅವರು ಡಾಲಿ ಎಂಬ ವಿಲನ್ ಪಾತ್ರದ ಮೂಲಕ ಮಿಂಚಿದರು. ಆ ಬಳಿಕ ಧನಂಜಯ್ ಅವರು ಡಾಲಿ ಎಂದೇ ಫೇಮಸ್ ಆದರು. 2021ರಲ್ಲಿ ಅವರ ನಟನೆಯ 6 ಸಿನಿಮಾಗಳು ರಿಲೀಸ್ ಆದವು. ಅಲ್ಲದೇ ಪುಷ್ಪ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಹ ಹೆಸರುವಾಸಿಯಾದರು ಧನಂಜಯ್.

ಹೆಡ್​ ಬುಷ್, ಹೊಯ್ಸಳ, ಪುಷ್ಪ 2 ಸೇರಿದಂತೆ ಏಳಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡಾಲಿ ಧನಂಜಯ್‌ ಬ್ಯುಸಿಯಾಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link