Black Guava: ಕಪ್ಪು ಪೇರಲ.. ಮಧುಮೇಹಕ್ಕೆ ಶಾಶ್ವತ ಪರಿಹಾರ, ಆರೋಗ್ಯಕ್ಕಿದೆ ಇಷ್ಟೆಲ್ಲ ಲಾಭ!

Sun, 09 Jul 2023-1:07 pm,

Black Guava: ಕಪ್ಪು ಪೇರಲ ಹಣ್ಣು ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಹಲವಾರು ರೀತಿಯ ಪೋಷಕಾಂಶಗಳು ದೊರೆಯುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಈ ಹಣ್ಣುಗಳು ಭಾರತದಲ್ಲಿ ಅಪರೂಪವಾಗಿ ಲಭ್ಯವಿವೆ. ಹಾಗಾಗಿ ಇವುಗಳ ಬೆಲೆಯೂ ತುಂಬಾ ಹೆಚ್ಚು.  

Black Guava: ಕಪ್ಪು ಪೇರಲ ಹಣ್ಣಿನ ತಿರುಳು ಕೂಡ ಕಪ್ಪು. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ನಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ಇವುಗಳನ್ನು ಆಗಾಗ ತಿನ್ನುವುದರಿಂದ ತೀವ್ರತರವಾದ ದೀರ್ಘಕಾಲದ ಕಾಯಿಲೆಗಳಿಂದ ಸುಲಭವಾಗಿ ಪರಿಹಾರ ಪಡೆಯಬಹುದು.  

Black Guava: ಕಪ್ಪು ಪೇರಲದಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಹಾಗಾಗಿ ಇವುಗಳನ್ನು ಪ್ರತಿದಿನ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದಲ್ಲದೆ, ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳು ಸಹ ಸುಲಭವಾಗಿ ನಿವಾರಣೆಯಾಗುತ್ತವೆ.  

Black Guava: ಆಗಾಗ್ಗೆ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಕಪ್ಪು ಪೇರಲವನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.  

Black Guava: ಕಪ್ಪು ಪೇರಲವನ್ನು ವಿಶೇಷವಾಗಿ ಮಧುಮೇಹಿಗಳು, ಪ್ರತಿದಿನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ತೀವ್ರ ಮಧುಮೇಹದಿಂದ ಬಳಲುತ್ತಿರುವವರು ಈ ಕಪ್ಪು ಪೇರಲವನ್ನು ತಪ್ಪದೇ ಸೇವಿಸಬೇಕು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link