Deepika Das: ಲಂಡನ್ ಬೀದಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ನಾಗಿಣಿ ಬೆಡಗಿ!

Mon, 18 Dec 2023-4:58 pm,

ನಟಿ ದೀಪಿಕಾ ದಾಸ್ ಇದೀಗ ಲಂಡನ್‌ನಲ್ಲಿ ತಮ್ಮ ಟ್ರಿಪ್ ಎಂಜಾಯ್ ಮಾಡುತ್ತಿದ್ದು, ಲಂಡನ್‌ನ ಬೀದಿ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

ನಾಗಿಣಿ ಸೀರಿಯಲ್‌ ನಟಿ ದೀಪಿಕಾ ದಾಸ್ ಲಂಡನ್‌ಗೆ ತೆರಳಿ ಕ್ರಿಸ್ಮಸ್ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. 

ದೀಪಿಕಾ ದಾಸ್‌ ತಮ್ಮ ಬಟ್ಟೆಗಳ ಆಯ್ಕೆಯಿಂದ ಯಾವಾಗಲು ಟ್ರೆಂಡ್ ಸೃಷ್ಠಿ ಮಾಡುವ ನಟಿ , ಬ್ಲೂ ಡ್ರೆಸ್ ಧರಿಸಿ, ಅದರ ಮೇಲೆ ಗೋಧಿ ಬಣ್ಣದ ಬ್ಲೆಜರ್ ತೊಟ್ಟು ಫೋಟೋಗಳಿಗೆ ಫೋಸ್ ನೀಡಿದ್ದಾರೆ.

ನಟಿ ದೀಪಿಕಾ ಯಾವುದೇ ಹೇರ್‌ ಸ್ಟೈಲ್‌ ಮಾಡಿದೇ, ಕೂದಲು ಫ್ರಿಯಾಗಿ ಬಿಟ್ಟು ತಲೆಗೆ ಮುದ್ದಾದ ಟೋಪಿ ಧರಿಸಿದ್ದಾರೆ.

ನಟಿ ದೀಪಿಕಾ ದಾಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ತಕ್ಷಣ ಫ್ಯಾನ್ಸ್ ಅಲರ್ಟ್ ಆಗಿದ್ದಾರೆ. ಫೋಟೋಗಳಲ್ಲಿ ಒಬ್ಬರೇ ಇರುವುದನ್ನು ನೋಡಿ, ಒಬ್ಬರೇ ಹೋಗಿದ್ದಿರಾ ಎಂದ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.

ದೀಪಿಕಾ ದಾಸ್ ಲಂಡನ್ ಬೀದಿಯಲ್ಲಿ ಸುತ್ತುತ್ತಿರುವ ವೇಳೆ  ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದನ್ನು ನೋಡಿದ ದೀಪಿಕಾ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಹಾಗೆಯೇ ಲೈಕ್, ಕಾಮೆಂಟ್‌ಗಳನ್ನ ಮಾಡಿ ದೀಪಿಕಾ ಸೌಂದರ್ಯವನ್ನು ಹಾಡಿ ಹೊಗಳುತ್ತಾ ಇದ್ದಾರೆ.

ನಟಿ ದೀಪಿಕಾ ದಾಸ್‌ ನಾಗಿಣಿ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಬಹಳ ಖ್ಯಾತಿ ಪಡೆದವರು, ಧಾರಾವಾಹಿ ಬಳಿಕ ಬಿಗ್ ಬಾಸ್ ಮನೆಗೆ ತೆರಳಿ, ಅಲ್ಲಿ ಕೂಡ ಜನರಿಗೆ ಮೆಚ್ಚುಗೆ ಆಗುವ ಹಾಗೆ ಆಟವಾಡಿದ್ದರು.

ನಾಗಿಣಿ ಸುಂದರಿ ದೀಪಿಕಾ ದಾಸ್ ಸದ್ಯ ಯಾವುದೇ ಟಿಪಿ ಧಾರಾವಾಹಿಗಳಲ್ಲಿ ಕಾಣಿಸಿಕೊಲ್ಳುತ್ತಿಲ್ಲ. ಹೀಗಾಗಿ ತಮ್ಮ ಫ್ರೀ ಟೈಂನಲ್ಲಿ ಆಗಾಗ ವಿದೇಶಕ್ಕೆ ತೆರಳಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link