Deepika Das: ಲಂಡನ್‌ನಲ್ಲಿ ನಾಗಿಣಿಯ ಜಾಲಿ ಟ್ರಿಪ್!‌

Mon, 15 Jan 2024-12:29 pm,

ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಿದ್ದು, ಸದ್ಯ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದಾರೆ.   

ದೀಪಿಕಾ ದಾಸ್ ಆಗಾಗ ಟ್ರಕ್ಕಿಂಗ್ ಹಾಗೆಯೇ ವಿದೇಶ ಪ್ರಯಾಣದಲ್ಲಿ ಕಾಲ ಕಳೆಯುತ್ತಿದ್ದು, ಸಿನಿಮಾ ಹಾಗೂ ಧಾರಾವಾಹಿಗಳಿಂದ ಕೊಂಚ ದೂರ ಆಗಿರುವ ನಟಿ ಆಗಾಗ ಉತ್ತಮ ಜಾಗಗಳಿಗೆ ಟ್ರಿಪ್ ಹೋಗುತ್ತಾರೆ.

ನಟಿ ದೀಪಿಕಾ ದಾಸ್‌ ಇತ್ತೀಚೆಗೆ ಲಂಡನ್‌ಗೆ ತೆರೆಳಿದ್ದು, ಅಲ್ಲಿಯ ಫೋಟೋಗಳನ್ನು ಸೋಷಿಯಲ್‌ ಮಿಡಯಾದಲ್ಲಿ ಹಂಚಿಕೊಂಡಿದ್ದಾರೆ.

ದೀಪಿಕಾ ಹಂಚಿಕೊಂಡಿರುವ ಫೋಟೋಗಳಲ್ಲಿ, ಈಕೆ ಪಿಂಕ್‌ ಕ್ರಾಪ್‌ ಟಾಪ್‌ ಮೇಲೆ ಲಾಂಗ್‌ ಸ್ವೆಟರ್‌ ಕ್ಲಾಟ್‌ ಬ್ಲೇಜರ್‌ ಹಾಗೂ ಸ್ವೆಟರ್‌ ಪ್ಯಾಂಟ್‌ ಧರಿಸಿ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ.

ಕಿರುತೆರೆ ಬೆಡಗಿ ದೀಪಿಕಾ ಹಾಗೆಯೆ ತೆಲೆಗೆ ಕ್ಯಾಪ್‌ ಹಾಗೂ ಪಿಂಕ್‌ ಸ್ಪೋರ್ಟ್‌ ಶೂಸ್‌ ಧರಿಸಿ ಫೋಟೋಗಳಿಗೆ ಫೂಸ್‌ ನೀಡಿದ್ದಾರೆ.

ದೀಪಿಕಾ ಹಂಚಿಕೊಂಡು ಫೋಟೋಸ್‌ಗೆ ಈಗಾಗಲೇ ಸಾಕಷ್ಟು ಲೈಕ್ಸ್‌ ಬಂದಿದ್ದು, ಫ್ಯಾನ್ಸ್‌ ಕಮೆಂಟ್‌ ವಿಭಾಗದಲ್ಲಿ ಸುಂದರವಾಗಿದೆ, ದೇವತೆ, ಬಾರ್ಬಿ ಅಂತೆಲ್ಲಾ ಬರೆದಿದ್ದಾರೆ.

ನಟಿ ದೀಪಿಕಾ ದಾಸ್‌ ಈ ಹಿಂದೆ ಬಿಗ್‌ಬಾಸ್‌ ಸೀಸನ್‌ 7ರಲ್ಲಿ ಸ್ಪರ್ಧಿಯಾಗಿ ದೊಡ್ಮೆನೆಯಲ್ಲಿಯೂ ಮಿಂಚಿದ್ದರು. ಶೋನಲ್ಲಿ ಉತ್ತಮ ಪ್ರದರ್ಶನ ತೋರಿ ಮನರಂಜನೆ ನೀಡಿದ್ದರು  

ZEENEWS TRENDING STORIES

By continuing to use the site, you agree to the use of cookies. You can find out more by Tapping this link