ಪುಟ್ಟ ಮಗಳ ಜೊತೆ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಫೋಟೋಶೂಟ್‌! ವೈರಲ್‌ ಫೋಟೋಸ್‌ ಇಲ್ಲಿದೆ ನೋಡಿ!!

Fri, 25 Oct 2024-2:04 pm,

Deepika Padukone baby photo: ನಟಿ ದೀಪಿಕಾ ಪಡುಕೋಣೆ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಅವರು ಗರ್ಭಿಣಿ ಎಂದು ಘೋಷಿಸಿದ್ದ ಈ ದೀಪಿಕಾ  ಸೆಪ್ಟೆಂಬರ್ 8 ರಂದು ಗಣೇಶೋತ್ಸವದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.   

ಹೆರಿಗೆಗೆ ಎರಡು ದಿನಗಳ ಮೊದಲು ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣಪತಿ ಬಪ್ಪನ ದರ್ಶನ ಪಡೆದಿದ್ದರು. ಮರುದಿನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ನಟಿ ಮಗುವಿಗೆ ಜನ್ಮ ನೀಡಿದ್ದು, ನಟಿ ಒಂದು ವಾರದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.   

ಸದ್ಯ ನಟಿ ದೀಪಿಕಾ ಪಡುಕೋಣೆ ಯಾವಾಗ ತಮ್ಮಮ ಮಗಳ ಫೋಟೋವನ್ನು ರಿವೀಲ್‌ ಮಾಡ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ.  

ದೀಪಿಕಾ ಪಡುಕೋಣೆ ಹಾಗೂ ರಾಣವೀರ್‌ ಸಿಂಗ್‌ ಮಗುವಿನ ಜೊತೆ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧ ಪಟ್ಟ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

ಪುಟ್ಟ ಮಗುವನ್ನು ಕೈಯಲ್ಲಿಡಿದ ದೀಪಿಕಾ ಪಡುಕೋಣೆ ಮಗುವಿನೊಂದಿಗೆ, ಪತಿ ರಣವೀರ್‌ ಸಿಂಗ್‌ ಜೊತೆಗೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗುತ್ತಿರುವ ಈ ಫೋಟೋ ಅಸಲಿಯಲ್ಲ ನಖಲಿ. ದೀಪಿಕಾ ಹಾಗೂ ರಣವೀರ್‌ ಸಿಂಗ್‌ ಇಬ್ಬರೂ ಜೊತೆಗೆ ಮಗು ಇರುವಂತೆ ಫೋಟೋ ವೈರಲ್‌ ಆಗುತ್ತಿದ್ದು, ಇದೊಂದು ಮಾರ್ಫಡ್‌ ಫೋಟೋ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link