ಮೂರು ತಿಂಗಳ ನಂತರ ಕೊನೆಗೂ ಹೊರ ಬಂತು ದೀಪಿಕಾ ಮಗಳ ಪೋಟೋ !ಮಗುವಿನ ಸ್ಪಷ್ಟ ಚಿತ್ರಣ ಕಂಡು ಅಭಿಮಾನಿಗಳು ಫುಲ್ ಖುಷ್
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಪುತ್ರಿ ದುವಾಗೆ ಈಗ 3 ತಿಂಗಳು. ಸಾಮಾಜಿಕ ಮಾಧ್ಯಮದಲ್ಲಿ ದೀಪಿಕಾ ಪುತ್ರಿ ಫೋಟೋ ಹರಿದಾಡುತ್ತಿದೆ.
ದೀಪಿಕಾ ಮತ್ತು ರಣವೀರ್ ತಮ್ಮ ಪುಟ್ಟ ಮಗುವಿನೊಂದಿಗೆ ಇರುವ ಮೂರು ಫೋಟೋವ ನ್ನು ಶೇರ್ ಮಾಡಲಾಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ತೀವ್ರ ಸಂತಸಗೊಂಡಿದ್ದಾರೆ.
ಕೊನೆಗೂ ಮಗುವಿನ ಮುಖ ತೋರಿಸಿರುವುದಕ್ಕೆ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ. ಮಗುವಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ಹರಸುತ್ತಿದ್ದಾರೆ.
ಇದೀಗ ಹೊರ ಬಂದಿರುವ ಮೂರೂ ಫೋಟೋಗಳಲ್ಲಿ ಮಗುವಿನ ಮುಖ ಸ್ಪಷ್ಟವಾಗಿ ಕಾಣುತ್ತಿದೆ ಎನ್ನುವುದೇ ಅಭಿಮಾನಿಗಳಿಗೆ ಸಂತಸದ ವಿಷಯ. ಫೋಟೋ ನೋಡಿದ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಫೋಟೋದಲ್ಲಿ, ದೀಪಿಕಾ ಮಗುವನ್ನು ತನ್ನ ಮಡಿಲಲ್ಲಿ ಹಿಡಿದಿಟ್ಟುಕೊಂಡಿದ್ದು, ರಣವೀರ್ ಕೂಡಾ ಮಗಳ ಜತೆ ಇರುವುದನ್ನು ಕಾಣಬಹುದು. ಇನ್ನೊಂದು ಫೋತಿದಲ್ಲಿ ಮಗು ನಿದ್ರಿಸುತ್ತಿರುವುದನ್ನು ಗಮನಿಸಬಹುದು.
ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಮೂರು ಫೋಟೋಗಳು ನಿಜವಲ್ಲ, ನಕಲಿ. ಈ ಫೋಟೋಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಅವರ ತಲೆಯನ್ನು ಸೇರಿಸುವ ಮೂಲಕ AI ಸಹಾಯದಿಂದ ಯಾರೋ ಫೋಟೋಗಳನ್ನು ಎಡಿಟ್ ಮಾಡಲಾಗಿದೆ.
ಈ ಫೋಟೋಗಳು ವೈರಲ್ ಆದ ತಕ್ಷಣ, ಜನರು ಇದು ಒರಿಜಿನಲ್ ಫೋಟೋ ಎಂದು ತಿಳಿದು ಪ್ರೀತಿ, ಆಶೀರ್ವಾದದ ಮಳೆಗರೆದಿದ್ದಾರೆ. ಆದರೆ ನಂತರ ಇದು ಒರಿಜಿನಲ್ ಫೋಟೋ ಅಲ್ಲ ಎನ್ನುವುದು ಬೆಳಕಿಗೆ ಬಂದಿದೆ.