ಪೆಟ್ರೋಲ್ ಡೀಸೆಲ್ ಜಂಜಾಟವೇ ಬೇಡ, ಶೀಘ್ರ ರಸ್ತೆಗಿಳಿಯಲಿದೆ ಈ ಅತ್ಯದ್ಭುತ ಹೈಡ್ರೋಜನ್ ಬಸ್..!

Mon, 22 Feb 2021-12:48 pm,

ಹೈಡ್ರೋಜನ್ ಇಂಧನದಿಂದ ಓಡುತ್ತೆ ಈ ಬಸ್.! ಗ್ರೀನ್ ಮೊಬಿಲಿಟಿ ಸೇವೆ ಬಗ್ಗೆ ಭಾರತ ಸರ್ಕಾರ ಬಹಳ ತಲೆಕೆಡಿಸಿಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್ ಬಗ್ಗೆ ಅವಲಂಬನೆ ಕಡಿಮೆ ಮಾಡುವುದು ಇದರ ಉದ್ದೇಶ. ಈ ನಿಟ್ಟಿನಲ್ಲೇ ಹೈಡ್ರೋಜನ್ ಇಂಧನ ಚಾಲಿತ ಬಸ್ ಗಳನ್ನು  ಸರ್ಕಾರ ರಸ್ತೆಗಿಳಿಸುತ್ತಿದೆ. ಇದರ ಬಗ್ಗೆ ಸಂಶೋಧನೆಗಳು ನಿರಂತರವಾಗಿ ಸಾಗುತ್ತಿವೆ. ಹೈಡ್ರೋಜನ್  ಇಂಧನ ಚಾಲಿತ  ಬಸ್‍ ಗಳಿಂದ ಮಾಲಿನ್ಯ ಆಗೋದಿಲ್ಲ.   

ಎನ್ ಟಿಪಿಸಿ ಆರಂಭಿಸಲಿದೆ ಹೈಡ್ರೋಜನ್ ಬಸ್ ಸೇವೆ : ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೋರೇಷನ್ ಹೈಡ್ರೋಜನ್ ಬಸ್ ಸಾರಿಗೆಯ ಉಸ್ತುವಾರಿ ವಹಿಸಿಕೊಂಡಿದೆ. ಎನ್ ಟಿಪಿಸಿಯೇ  ಅದರ ಯೋಜನೆ ರೂಪಿಸುತ್ತಿದೆ. ದೆಹಲಿ-ಜೈಪುರ ನಡುವೆ ಮೊದಲ ಹೈಡೋಜನ್ ಚಾಲಿತ ಬಸ್ ಸಂಚರಿಸಲಿದೆ. ಈ ಸೇವೆ ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.   

 ಮುಂಬಯಿಯಲ್ಲೂ ಹೈಡ್ರೋಜನ್ ಬಸ್ ಸೇವೆಯ ಟೆಸ್ಟಿಂಗ್ : ಮುಂಬಯಿನಲ್ಲೂ ಹೈಡ್ರೋಜನ ಇಂಧನ ಚಾಲಿತ ಬಸ್ ಪರೀಕ್ಷೆ ನಡೆಯುತ್ತಿದೆ. 2018ರಲ್ಲಿಯೇ ಟಾಟಾ ಮೋಟಾರ್ಸ್ ಮತ್ತು ಐಒಸಿ ಸೇರಿ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಪರೀಕ್ಷೆ ನಡೆಸಿತ್ತು.

ಎಲೆಕ್ಟ್ರಿಕ್ ಬಸ್ ಓಡಿಸಲೂ ಚಿಂತನೆ : ಹೈಡ್ರೋಜನ್ ಬಸ್ ಬಗ್ಗೆ ಇಂಧನ ಸಚಿವ ಆರ್‍ ಕೆ ಸಿಂಗ್ ಇನ್ನಷ್ಟು ಮಾಹಿತಿ ಕೊಟ್ಟಿದ್ದಾರೆ. ದೆಹಲಿಯಿಂದ ಜೈಪುರ ತನಕ ಪ್ರೀಮಿಯಂ ಹೈಡ್ರೋಜನ್ ಬಸ್ ಓಡಿಸುವ ಯೋಜನೆ ರೂಪುಗೊಳ್ಳುತ್ತಿದೆ. ನಂತರ ಇದೇ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಕೂಡಾ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.   

ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ-ವಾಹನ ಕಡ್ಡಾಯ : ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಎಲೆಕ್ಟ್ರಿಕ್ ವಾಹನ ಕಡ್ಡಾಯ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈಗಾಗಲೇ ಹೇಳಿದ್ದಾರೆ.  ಮಹಾರಾಷ್ಟ್ರ ಸರ್ಕಾರ ಈಗಾಗಲೇ 40000 ಎಲೆಕ್ಟ್ರಿಕ್ ಬಸ್ ಖರೀದಿಸಲು ಯೋಜನೆ ರೂಪಿಸಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link