IPL 2025: ದೇವದತ್ ಪಡಿಕಲ್ ಖರೀದಿಸದಿರಲು ಕಾರಣವೇ ಈ ಒಂದು ವಿಚಾರ! ಐಪಿಎಲ್ ಹರಾಜಿನಲ್ಲಿ ಮೂವರು ಕನ್ನಡಿಗರು ಅನ್‌ಸೋಲ್ಡ್!
ಸೌದಿ ಅರೇಬಿಯಾದಲ್ಲಿ ನಡೆದ ಐಪಿಎಲ್ ಸೀಸನ್ 18ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮೂವರು ಕನ್ನಡಿಗರು ಅನ್‌ಸೋಲ್ಡ್ ಆಗಿದ್ದಾರೆ. ಐಪಿಎಲ್ ಮೆಗಾ ಹರಾಜಿನ ಮೊದಲ ದಿನ 12 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಹನ್ನೆರಡು ಆಟಗಾರರಲ್ಲಿ ಮೂವರು ಕನ್ನಡಿಗರು ಅನ್‌ಸೋಲ್ಡ್ ಆಗಿದ್ದಾರೆ.
ದೇವದತ್ ಪಡಿಕ್ಕಲ್: ಆರ್‌ಸಿಬಿಯ ಆರಂಭಿಕ ಅಟಗಾರನಾಗಿ ಮಿಂಚಿದ ದೇವದತ್ ಪಡಿಕ್ಕಲ್ ಈ ಬಾರಿ ಅನ್‌ಸೋಲ್ಡ್ ಆಗಿರುವುದು ಹಲವರಿಗೆ ಆಶ್ಚರ್ಯ ಮೂಡಿಸಿದೆ. 2 ಕೋಟಿ ರೂಪಾಯಿ ಮೂಲ ಬೆಲೆಗೆ ಬಿಡ್ಡಿಂಗ್ ಕೂಗಲಾಯಿತು.
ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಅನ್‌ಸೋಲ್ಡ್ ಆದರು. ಈ ವರ್ಷ ಇಂಗ್ಲೆಂಡ್ ಸರಣಿಯಲ್ಲಿ ದೇವದತ್ ಪಡಿಕ್ಕಲ್ ಟೀಂ ಇಂಡಿಯಾ ಪರ ಟೆಸ್ಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಪಂದ್ಯದಲ್ಲಿ 65 ರನ್‌ಗಳ ಇನಿಂಗ್ಸ್ ಆಡಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲೂ ದೇವದತ್ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಎರಡು ಪಂದ್ಯಗಳಲ್ಲಿ 36, 88, 26 ಮತ್ತು ಒಂದು ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಇದಲ್ಲದೇ ಅಗ್ರ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಪಡಿಕ್ಕಲ್ ಇಲ್ಲಿಯವರೆಗೆ 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 42.49 ರ ಸರಾಸರಿಯಲ್ಲಿ 2677 ರನ್ ಗಳಿಸಿದ್ದಾರೆ. ಇದರಲ್ಲಿ 17 ಅರ್ಧ ಶತಕಗಳು ಮತ್ತು 6 ಶತಕಗಳು ಸೇರಿವೆ. ಇದಲ್ಲದೇ ಆರ್‌ಸಿಬಿ ತಂಡದಲ್ಲಿ ಓಪನರ್ ಆಗಿ ಸಹ ಪಡಿಕ್ಕಲ್ ಮಿಂಚಿದ್ದರು.
ಇಷ್ಟೆಲ್ಲ ಸಾಮರ್ಥ್ಯ ಹೊಂದಿದ್ದರೂ ದೇವದತ್ ಪಡಿಕ್ಕಲ್ ಮಾರಾಟವಾಗದೇ ಉಳಿದಿರುವುದು ಆಶ್ಚರ್ಯ ಮೂಡಿಸಿದೆ. ಕಳೆದ ಸೀಸನ್‌ನಲ್ಲಿ ಪಡಿಕ್ಕಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಟವಾಡಿದ್ದರು. ಆದರೆ ಕೆಲವು ಪಂದ್ಯಗಳಲ್ಲ ಕಳೆದ ಐಪಿಎಲ್‌ನಲ್ಲಿ ಪಡಿಕ್ಕಲ್ ಎಡವಿದ್ದರು. ಈ ಒಂದೇ ಕಾರಣಕ್ಕೆ ಅವರನ್ನು ಎರಡನೇ ಸುತ್ತಿನಲ್ಲಿ ಖರೀದಿಸಲು ಪ್ರಾಂಚೈಸಿಗಳು ಕಾಯ್ದಿರಿಸಿರಬಹುದು.
ಲವ್ನೀತ್ ಸಿಸೋಡಿಯಾ: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಲವ್ನೀತ್ ಸಿಸೋಡಿ ಕೂಡ ಮೊದಲ ದಿನದ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಬಂದ ಸಿಸೋಡಿಯಾ ಹರಾಜಿನಲ್ಲಿ ಮಾರಾಟವಾಗಲಿಲ್ಲ. RCB ಯ ಮಾಜಿ ಆಟಗಾರ ಸಿಸೋಡಿಯಾ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ.
ಶ್ರೇಯಸ್ ಗೋಪಾಲ್: ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಶ್ರೇಯಸ್ ಗೋಪಾಲ್ ಸ್ಪಿನ್ ಆಲ್ರೌಂಡರ್ ಆಗಿದ್ದಾರೆ. ಮೊದಲ ದಿನದ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿರುವುದು ಅಚ್ಚರಿ ಮೂಡಿಸಿದೆ.
ಈ ಮೂವರಲ್ಲದೆ ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ಕಾರ್ ಸಲಾಮ್ಖೈಲ್, ಉಪೇಂದ್ರ ಯಾದವ್, ಪಿಯೂಷ್ ಚಾವ್ಲಾ, ಯಶ್ ಧುಲ್, ಉತ್ಕರ್ಷ್ ಸಿಂಗ್, ಕಾರ್ತಿಕ್ ತ್ಯಾಗಿ, ಅನ್ಮೋಲ್ಪ್ರೀತ್ ಸಿಂಗ್ ಮೊದಲ ದಿನದ ಹರಾಜಿನಲ್ಲಿ ಮಾರಾಟವಾಗದೇ ಉಳಿದರು.