ಧನತ್ರಯೋದಶಿ ದಿನ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿಸಬೇಡಿ; ಬಡತನ ಹುಡಿಕಿಕೊಂಡು ಬರುತ್ತೆ ಹುಷಾರ್!
ಧನತ್ರಯೋದಶಿ ದಿನಂದು ಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಈ ನಿರ್ದಿಷ್ಟ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಧನತ್ರಯೋದಶಿಯಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ದುರಾದೃಷ್ಟವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾದ್ರೆ ಧನ ತ್ರಯೋದಶಿಯಂದು ಯಾವ ವಸ್ತುಗಳನ್ನು ಖರೀದಿಸಬಾರದು ಎಂದು ತಿಳಿಯಿರಿ.
ಕಬ್ಬಿಣವು ಶನಿಯೊಂದಿಗೆ ಸಂಬಂಧಿಸಿದೆ. ಮಂಗಳಕರ ದಿನವೆಂದು ಪರಿಗಣಿಸಲಾದ ಧನತ್ರಯೋದಶಿಯ ದಿನ ಕಬ್ಬಿಣವನ್ನು ಖರೀದಿಸಬಾರದು. ಈ ದಿನ ಪಾತ್ರೆಗಳನ್ನು ಖರೀದಿಸುವಾಗ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಸ್ಟೀಲ್ ಅಥವಾ ಅಲ್ಯೂಮಿನಿಯಂ ಪಾತ್ರೆಗಳನ್ನು ಖರೀದಿಸಬೇಡಿ. ಇವುಗಳ ಬದಲಿಗೆ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಮನೆಗೆ ತರುವುದು ಶುಭಕರ.
ಕಪ್ಪು ಬಣ್ಣ ಮಂಗಳಕರವಲ್ಲ. ಹೀಗಾಗಿ ಧನತ್ರಯೋದಶಿಯ ಶುಭ ದಿನದಂದು ಕಪ್ಪು ಬಣ್ಣದ ಚೀಲಗಳು, ಬಟ್ಟೆಗಳು, ಶೂಗಳು, ಕಪ್ಪು ಕಂಬಳಿ ಮುಂತಾದವುಗಳನ್ನು ಖರೀದಿಸುವುದು ಶುಭವಲ್ಲ. ಇದಲ್ಲದೆ ಚರ್ಮ ಮತ್ತು ಪ್ರಾಣಿಗಳ ಚರ್ಮದ ಉತ್ಪನ್ನಗಳನ್ನು ಖರೀದಿಸಬಾರದು.
ಅನೇಕ ಜನರು ತಮ್ಮ ಮನೆ ಅಲಂಕರಿಸಲು ಗಾಜಿನ ವಸ್ತುಗಳನ್ನು ಬಳಸುತ್ತಾರೆ. ಧನ ತ್ರಯೋದಶಿಯಂದು ಗಾಜಿನ ವಸ್ತುಗಳನ್ನು ಖರೀದಿಸಬಾರದು. ಈ ದಿನ ಗಾಜಿನ ಪಾತ್ರೆಗಳು ಅಥವಾ ಗಾಜಿನ ಆಭರಣಗಳನ್ನು ಖರೀದಿಸಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಹೀಗಾಗಿಯೇ ಇವುಗಳನ್ನು ದೂರ ಇಡಬೇಕು. ಈ ವಸ್ತುಗಳನ್ನು ಧನತ್ರಯೋದಶಿ ಹೊರತುಪಡಿಸಿ ಇತರ ದಿನಗಳಲ್ಲಿ ಖರೀದಿಸಬಹುದು.
ಧನತ್ರಯೋದಶಿಯಂದು ಚಾಕು, ಕತ್ತರಿ, ಸೂಜಿ, ಕತ್ತರಿ ಮುಂತಾದ ಹರಿತವಾದ ವಸ್ತುಗಳನ್ನು ಖರೀದಿಸಬಾರದು. ಇವು ಹಾನಿಕಾರಕ ಸಂಕೇತಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಧನತ್ರಯೋದಶಿ ದಿನ ಇವುಗಳನ್ನು ಮನೆಗೆ ಯಾವುದೇ ಕಾರಣಕ್ಕೂ ತರಬೇಡಿ.
ಇತ್ತೀಚಿನ ದಿನಗಳಲ್ಲಿ ಜನರು ಚಿನ್ನಾಭರಣಗಳಿಗಿಂತ ಕೃತಕ ಆಭರಣ ಧರಿಸಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಕಡಿಮೆ ಬೆಲೆಯಲ್ಲಿ ವಿವಿಧ ಮಾದರಿಗಳ ಆಭರಣ ಸಿಗುತ್ತವೆ ಎಂದು ಖರೀದಿಸುತ್ತಾರೆ. ಆದ್ದರಿಂದ ಇವುಗಳನ್ನು ಹೆಚ್ಚು ಖರೀದಿಸಲಾಗುತ್ತದೆ. ಧನತ್ರಯೋದಶಿಯಂದು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸುವುದು ಶುಭ. ಆದರೆ ಈ ದಿನ ಕೃತಕ ಆಭರಣಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು.
ಧನತ್ರಯೋದಶಿಯಂದು ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಇದು ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹೀಗಾಗಿ ಇವುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬೇಡಿ.