ಧನುರ್ಮಾಸ 2023: ಈ ಮೂರು ರಾಶಿಯವರ ಜೀವನದಲ್ಲಿ ಬಂಪರ್ ಧನಲಾಭ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯದೇವನು ಡಿಸೆಂಬರ್ 16, 2023ರಂದು ಧನು ರಾಶಿಗೆ ಪ್ರವೇಶಿಸಲಿದ್ದಾನೆ. ನಂತರ ಮುಂದಿನ ಒಂದು ತಿಂಗಳು ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಸೂರ್ಯ ದೇವನು ಧನು ರಾಶಿಯಲ್ಲಿ ಸಂಚರಿಸುವ ಸಮಯವನ್ನು ಧನುರ್ ಮಾಸ ಅಥವಾ ಕರ್ಮ ಮಾಸ, ಮೂಲ ಮಾಸ ಎಂದು ಕರೆಯಲಾಗುತ್ತದೆ.
ಈ ಕರ್ಮ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ.
ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಧನುರ್ ಮಾಸವು ಕೆಲವು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಪರಿಗಣಿಸಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ಮೇಷ ರಾಶಿ: ಧನುರ್ಮಾಸವು ಮೇಷ ರಾಶಿಯವರಿಗೆ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಮಿಥುನ ರಾಶಿ: ಧನುರ್ಮಾಸದಲ್ಲಿ ಮಿಥುನ ರಾಶಿಯವರಿಗೆ ಆದಾಯ ಹೆಚ್ಚಾಗಲಿದ್ದು, ಆರ್ಥಿಕ ಪ್ರಗತಿಯನ್ನು ಕಾಣುವಿರಿ.
ಧನು ರಾಶಿ: ಧನುರ್ಮಾಸದಲ್ಲಿ ಧನು ರಾಶಿಯವರಿಗೆ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟಗಳಿಂದ ಪರಿಹಾರವನ್ನು ಪಡೆಯುವಿರಿ. ಜೊತೆಗೆ ದಾಂಪತ್ಯ ಜೀವನವೂ ಆನಂದಮಯವಾಗಿರಲಿದೆ.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.