BBK 11 : ಬಿಗ್ ಬಾಸ್ ಮನೆಗೆ ದರ್ಶನ್‌ ಕುಚುಕು ಧರ್ಮ ಕೀರ್ತಿರಾಜ್ ಎಂಟ್ರಿ..! ಕಣ್‌ ಕಟ್ಟಿ ಕಿಚಾಯಿಸಿದ ಕಿಚ್ಚ..

Sun, 29 Sep 2024-9:08 pm,

ಖ್ಯಾತ ವಿಲನ್​ ಧರ್ಮ ಕೀರ್ತಿರಾಜ್ ಅವರ ಪುತ್ರ ಕೀರ್ತಿರಾಜ್‌ ನವಗ್ರಹ ಸಿನಿಮಾದಲ್ಲಿ ಕ್ಯಾಡ್ಬರೀಸ್​ ಎಂಬ ಪಾತ್ರ ಮಾಡಿದ್ದರು. ಇದೀಗ ಬಿಗ್​ ಬಾಸ್​ ಕನ್ನಡ ಸೀಸನ್​ 11 6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  

ಬಿಗ್​ ಬಾಸ್​ ಕನ್ನಡ ಸೀಸನ್​ 11 ಅದ್ದೂರಿಯಾಗಿ ಓಪನಿಂಗ್​ ಆಗಿದೆ. ನಿನ್ನೆ ಗೌತಮಿ ಜಾಧವ್​, ಲಾಯರ್​ ಜಗದೀಶ್, ಚೈತ್ರಾ ಕುಂದಾಪುರ, ಗೋಲ್ಡ್​ ಸುರೇಶ್​ ಅವರ ಹೆಸರುಗಳು ಬಹಿರಂಗ ಆಗಿದ್ದವು.   

ಇಂದು ಇನ್ನುಳಿದ ಸ್ಪರ್ಧಿಗಳ ಎಂಟ್ರಿ ಆಗಿದೆ. ಈ ಪೈಕಿ ನಟ ಧರ್ಮ ಕೀರ್ತಿರಾಜ್​ ಅವರು ಕೂಡ ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಸ್ಪರ್ಧಿ ಆಗಿ ದೊಡ್ಮನೆ ಪ್ರವೇಶ ಮಾಡಿದ್ದಾರೆ.  

ಧರ್ಮ ಕೀರ್ತಿರಾಜ್‌ ತಂದೆ ಕೀರ್ತಿರಾಜ್​ ಸ್ಯಾಂಡಲ್​ವುಡ್​ನಲ್ಲಿ ಫೇಮಸ್​ ವಿಲನ್. ದರ್ಶನ್ ಆಪ್ತ ಬಳಗದಲ್ಲಿ ಧರ್ಮ ಕೀರ್ತಿರಾಜ್​ ಗುರುತಿಸಿಕೊಂಡಿದ್ದಾರೆ..  

ನವಗ್ರಹ ಸಿನಿಮಾದ ಮೂಲಕ ಧರ್ಮ ಕೀರ್ತಿರಾಜ್ ಹೆಸರುವಾಸಿಯಾಗಿದ್ದರು.​ ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ ಜೋಡಿಯಾಗಿ ನಟಿಸಿದರು. ಕಣ್ ಕಣ್ಣ ಸಲಿಗೆ.. ಎಂಬ ಹಾಡು ಸೂಪರ್‌ ಹಿಟ್‌ ಆಗಿತ್ತು.  

ಧರ್ಮ ‘ಒಲವೇ ವಿಸ್ಮಯ’, ‘ಮುಮ್ತಾಜ್’, ‘ಕ್ಯಾಡ್ಬರಿಸ್’, ‘ರೋನಿ’, ‘ಖಡಕ್’, ‘ಓ ಮನಸೇ’, ‘ಚಾಣಾಕ್ಷ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಬಿಗ್​ ಬಾಸ್​ ಸ್ಪರ್ಧಿಯಾಗಿ ಎರಡನೇ ಇನ್ನಿಂಗ್ಸ್​ ಶುರು ಮಾಡಿದ್ದಾರೆ.  

ನಟಿ ಅನುಷಾ ರೈ 5ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ವೇದಿಕೆಗೆ ಬಂದರು. ಈ ವೇಳೆ ಅವರ ಕಣ್ಣು ಕಟ್ಟಿ ಧರ್ಮ ಕೀರ್ತಿಯಾಜ್‌ ಕೈ ಮುಟ್ಟಿಸಿ ಯಾರು ಅಂತ ಗೆಸ್‌ ಮಾಡುವಂತೆ ಕಿಚ್ಚ ಕಿಚಾಯಿಸಿದರು.. ಸಧ್ಯ  ಧರ್ಮ ಕೀರ್ತಿರಾಜ್ ಸ್ವರ್ಗದ ಮನೆಗೆ ಹೋಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link