ಧ್ರುವ ಸರ್ಜಾ ಮನೆಗೆ ಪುಟ್ಟ ಲಕ್ಷ್ಮಿ ಆಗಮನ : ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರೇರಣಾ..!
ಧ್ರುವ ಸರ್ಜಾ ಪತ್ನಿ ಪ್ರೇರಣಾ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ನಾರ್ಮಲ್ ಡೆಲಿವರಿ ಆಗಿದೆ. ಕೆಆರ್ ರಸ್ತೆಯಲ್ಲಿರೋ ಅಕ್ಷಾ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ.
ಪ್ರೇರಣಾ ಗರ್ಭಿಣಿ ಆಗಿರುವ ವಿಚಾರವನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು.
ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಎಂದು ಧ್ರುವ ಸರ್ಜಾ ವಿಡಿಯೊ ಪೋಸ್ಟ್ ಮಾಡಿ ಬರೆದುಕೊಂಡಿದ್ದರು.
2019, ನವೆಂಬರ್ 24ರಂದು ಈ ಮುದ್ದಾದ ಜೋಡಿ ಮದುವೆಯಾಗಿತ್ತು. ಇನ್ನು ಚಿರು ಅಗಲಿಕೆ ನಂತರ ಇದೀಗ ಧ್ರುವ, ಪ್ರೇರಣಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಣ್ಣನ ಮಗನೇ ನಮ್ಮ ಮಗ. ನಮಗೆ ಹೆಣ್ಣು ಮಗು ಬೇಕು ಎಂದು ಧ್ರುವ ಹೇಳಿದ್ದರು. ಈಗ ಅವರ ಆಸೆಯಂತೆಯೇ ಅವರಿಗೆ ಹೆಣ್ಣು ಮಗುವಾಗಿದೆ.