ಈ ಆಹಾರಗಳನ್ನು ನಿತ್ಯ ಸೇವಿಸಿದರೆ ಹೆಚ್ಚಾಗುವುದೇ ಇಲ್ಲ ಡಯಾಬಿಟಿಸ್
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ 'ಡಯಾಬಿಟಿಸ್'. ಆಹಾರ-ಪಾನೀಯಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಹ ಇದು ಬ್ಲಡ್ ಶುಗರ್ ಲೆವೆಲ್ ಮೇಲೆ ಪ್ರಭಾವ ಬೀರುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಆಹಾರಗಳನ್ನು ಸೇವಿಸುವುದರಿಂದ ಅವರ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗುವುದಿಲ್ಲ. ಅಂತಹ ಕೆಲವು ಆಹಾರಗಳೆಂದರೆ...
ಅನ್ನ ಆರೋಗ್ಯಕ್ಕೆ ಒಳ್ಳೆಯದೆ. ಆದರೆ, ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಇದು ಒಳ್ಳೆಯದಲ್ಲ. ಅನ್ನದ ಬದಲಿಗೆ ರಾಗಿ, ಗೋಧಿ, ಜೋಳ ಅಥವಾ ಬಜ್ರಾ ರೊಟ್ಟಿ ಸೇವಿಸಿ. ಇವು ಕಡಿಮೆ ಗ್ಲೈಸೆಮಿಕ್ ಆಹಾರವಾಗಿರುವುದರಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ.
ಸಾಮಾನ್ಯವಾಗಿ ಮಾಡುವ ಅಕ್ಕಿ ದೋಸೆ ಬದಲಿಗೆ ರಾಗಿ, ಓಟ್ಸ್ ನಂತಹ ಫಿಎರ್, ಪ್ರೊಟೀನ್ ಹೆಚ್ಚಾಗಿರುವ ಧಾನ್ಯಗಳಿಂದ ದೋಸೆ ತಯಾರಿಸಿ ಸೇವಿಸುವುದರಿಂದ ಮಧುಮೇಹಿಗಳಲ್ಲಿ ಹಠಾತ್ ಬ್ಲಡ್ ಶುಗರ್ ಏರಿಕೆಯ ಅಪಾಯವನ್ನು ಕಡಿಮೆ ಮಾಡಬಹುದು.
ಮಧುಮೇಹಿಗಳಿಗೆ ಸೋರೆಕಾಯಿ ಅತ್ಯುತ್ತಮ ತರಕಾರಿ ಆಗಿದೆ. ಇದು ಫೈಬರ್ನಲ್ಲಿ ಸಮೃದ್ಧವಾಗಿರುವುದರಿಂದ ಇದರ ಜ್ಯೂಸ್ ಕುಡಿಯುವುದರಿಂದ, ಇಲ್ಲವೇ ಪಲ್ಯ ತಯಾರಿಸಿ ಸೇವಿಸುವುದರಿಂದ ಮಧುಮೇಹ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದು.
ಮೊಳಕೆ ಕಾಳುಗಳು ಕಡಿಮೆ ಕ್ಯಾಲೋರಿ, ಕಡಿಮೆ ಪಿಷ್ಟದ ಅಂಶದ ಜೊತೆಗೆ ಫೈಬರ್ ಸಮೃದ್ಧ ಆಹಾರವಾಗಿದೆ. ನಿತ್ಯ ನಿಮ್ಮ ಆಹಾರದಲ್ಲಿ ಮೊಳಕೆ ಕಾಳುಗಳ ಸೇವನೆಯು ಶುಗರ್ ಕಂಟ್ರೋಲ್ ಮಾಡುವಲ್ಲಿ ಪರಿಣಾಮಕಾರಿ ಆಹಾರವಾಗಿ ಕಾರ್ಯನಿರ್ವಹಿಸುತ್ತದೆ.
ತಾಜಾ ಹಸಿರು ಸೊಪ್ಪು-ತರಕಾರಿಗಳಲ್ಲಿ ಪೋಷಕಾಂಶಗಳು ಹೇರಳವಾಗಿರುವುದರ ಜೊತೆಗೆ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳು ಕೂಡ ಕಂಡು ಬರುತ್ತವೆ. ನಿತ್ಯ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇವಿಸುವುದರಿಂದಲೂ ಕೂಡ ಮಧುಮೇಹ ನಿಯಂತ್ರಣದಲ್ಲಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.