ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರನ್ನೂ ಬಾಧಿಸುತ್ತಿರುವ ದೀರ್ಘಾವಧಿಯ ಕಾಯಿಲೆ ಎಂದರೆ ಮಧುಮೇಹ ಅಥವಾ ಡಯಾಬಿಟಿಸ್. ಈ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳ ಬಳಕೆಯಿಂದ ಮಧುಮೇಹಿಗಳಲ್ಲಿ ಎಂದಿಗೂ ಕೂಡ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯಬಹುದು.
ತಾಜಾ ಹಸಿರು ಸೊಪ್ಪುಗಳಲ್ಲಿ ಫೈಬರ್ ಹೆಚ್ಚಾಗಿದ್ದು ಇದು ಆಹಾರದಲ್ಲಿನ ಸಕ್ಕರೆಯನ್ನು ಬೇಗ ರಕ್ತದಲ್ಲಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ಶುಗರ್ ಹೆಚ್ಚು-ಕಡಿಮೆಯಾಗುವುದಿಲ್ಲ.
ಮಧುಮೆಹಿಗಳು ಸೀಮೆ ಬದನೆಕಾಯಿ, ಸೋರೆಕಾಯಿ, ಬೆಂಡೆಕಾಯಿ, ಎಲೆಕೋಸು, ಹೂಕೋಸು, ಗೆಡ್ಡೆಕೋಸು, ಸೌತೆಕಾಯಿ, ಟೊಮಾಟೊದಂತಹ ತರಕಾರಿಗಳನ್ನು ಯತೇಚ್ಛವಾಗಿ ಬಳಸುವುದರಿಂದ ಶುಗರ್ ಹೆಚ್ಚಾಗುವುದನ್ನು ತಡೆಯಬಹುದು.
ಮಧುಮೆಹಿಗಳು ಸೊಪ್ಪು-ತರಕಾರಿಗಳ ಜೊತೆಗೆ ದ್ವಿದಳ ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಬಳಸುವುದರಿಂದ ಶುಗರ್ ಹೆಚ್ಚಾಗುವುದಿಲ್ಲ.
ಬ್ರೊಕೊಲಿಯನ್ನು ಮಧುಮೆಹಿಗಳಿಗೆ ಅತ್ಯುತ್ತಮ ಆಹಾರ ಎಂದು ಪರಿಗಳಿಸಲಾಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಬ್ಲಡ್ ಶುಗರ್ ಕಂಟ್ರೋಲ್ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ.
ಮಧುಮೇಹಿಗಳಿಗೆ ಓಟ್ಸ್ ಅನ್ನು ಸಹ ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ನಿತ್ಯ ಓಟ್ಸ್ ಸೇವಿಸುವುದರಿಂದ ಇದು ದೇಹದಲ್ಲಿ ಕೆಟ್ಟ ಕೊಬ್ಬನ್ನು ನಿವಾರಿಸಿ, ಬ್ಲಡ್ ಶುಗರ್ ಅನ್ನು ಕೂಡ ನಿಯಂತ್ರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.