Diabetes: ಭಾರತದ ಯುವಜನರಲ್ಲಿ ಹೆಚ್ಚುತ್ತಿರುವ ಮಾರಕ ಸಕ್ಕರೆ ಕಾಯಿಲೆ!
ಕಳೆದ 4 ವರ್ಷಗಳಲ್ಲಿ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಶೇ.44ರಷ್ಟು ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸುಮಾರು 13 ಕೋಟಿ 30 ಲಕ್ಷ ರೋಗಿಗಳಿದ್ದಾರೆಂತೆ.
ಆಘಾತಕಾರಿ ಸಂಗತಿ ಎಂದರೆ ಭಾರತದಲ್ಲಿ 20 ವರ್ಷ ವಯಸ್ಸಿನ ಶೇ.65ರಷ್ಟು ಯುವಕರು ಮತ್ತು ಶೇ.56ರಷ್ಟು ಯುವತಿಯರು ಮಧುಮೇಹದಿಂದ ಬಳಲುತ್ತಿದ್ದಾರಂತೆ.
ಮಧುಮೇಹ ನಮ್ಮ ಕಣ್ಣುಗಳು, ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಅಧಿಕ ತೂಕ, ವ್ಯಾಯಾಮದ ಕೊರತೆ, ಧೂಮಪಾನ ಮತ್ತು ಮತ್ತು ಒತ್ತಡ ಇವು ಯುವಕರಲ್ಲಿ ಮಧುಮೇಹ ರೋಗ ಬರಲು ಮುಖ್ಯ ಕಾರಣಗಳಾಗಿವೆ.
ನಗರಗಳಲ್ಲಿ ಶೇ.32ರಷ್ಟು ಜನರು ಮಧುಮೇಹವನ್ನು ಹೊಂದಿದ್ದರೆ, ಹಳ್ಳಿಗಳಲ್ಲಿ ಶೇ.24ರಷ್ಟು ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆ. ಕೆಟ್ಟ ಜೀವನಶೈಲಿ ಕೂಡ ಮಧುಮೇಹಕ್ಕೆ ಕಾರಣವಾಗುತ್ತಿದೆ.
ಮಧುಮೇಹ ನಿಯಂತ್ರಿಸಲು ತೂಕವನ್ನು ನಿಯಂತ್ರಿಸಬೇಕು. ಪ್ರತಿದಿನ ವ್ಯಾಯಾಮ ಮಾಡಬೇಕು, ಸಮತೋಲಿತ ಆಹಾರ ತೆಗೆದುಕೊಳ್ಳಬೇಕು. ಹೆಚ್ಚು ನೀರು ಕುಡಿಯಬೇಕು ಹಾಗೂ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು.