Health Tips: ಮಧುಮೇಹ ರೋಗಿಗಳು ಈ 5 ಹಣ್ಣುಗಳಿಂದ ದೂರವಿರಬೇಕು!
ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದರ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಿರುವ ಜನರು ಈ ಹಣ್ಣಿನಿಂದ ದೂರವಿರಬೇಕು. ಏಕೆಂದರೆ ಇದು ಹೆಚ್ಚು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ.
ಬಾಳೆಹಣ್ಣು ಸಾಮಾನ್ಯವಾಗಿ ಪ್ರತಿಯೊಬ್ಬರೂ ಸೇವಿಸುವ ಹಣ್ಣು. ಇದು ದೇಹದ ಬಲಕ್ಕೆ ತುಂಬಾ ಅವಶ್ಯಕವಾಗಿದೆ. ಆದರೆ ಮಧುಮೇಹ ರೋಗಿಗಳು ಇದನ್ನು ತಪ್ಪಿಸಬೇಕು, ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೀಗಾಗಿ ಇದು ಸಕ್ಕರೆ ರೋಗಿಗಳಿಗೆ ಉತ್ತಮವಲ್ಲ.
ಮಧುಮೇಹ ರೋಗಿಗಳು ದ್ರಾಕ್ಷಿಯನ್ನು ತಿನ್ನಬಾರದು. ಏಕೆಂದರೆ ಈ ಹಣ್ಣಿನ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯವನ್ನು ಹದಗೆಡಿಸುವ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಒಂದು ಅಥವಾ ಎರಡು ದ್ರಾಕ್ಷಿಯನ್ನು ತಿಂದರೆ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ.
ಲಿಚಿ ಅತ್ಯಂತ ರುಚಿಕರವಾದ ಹಣ್ಣು, ಇದನ್ನು ವಿಶೇಷವಾಗಿ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತದೆ. ಮಧುಮೇಹ ರೋಗಿಗಳು ಈ ಹಣ್ಣನ್ನು ತಿನ್ನಬಾರದು, ಇದು ನೈಸರ್ಗಿಕ ಸಕ್ಕರೆಯೊಂದಿಗೆ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.
ಪೈನಾಪಲ್ ಅಥವಾ ಅನಾನಸ್‌ನ ಮಾಧುರ್ಯವು ಎಲ್ಲರನ್ನೂ ಆಕರ್ಷಿಸುತ್ತದೆ. ಅಧಿಕ ಸಕ್ಕರೆಯ ಹೊರತಾಗಿ ಇದು ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಸಹ ಹೊಂದಿರುತ್ತದೆ. ಮಧುಮೇಹ ರೋಗಿಗಳು ಇದನ್ನು ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುತ್ತದೆ.