Diwali 2021 Cars Offer: ಈ ಕಾರುಗಳ ಮೇಲೆ ಸಿಗುತ್ತಿದೆ ಒಂದು ಲಕ್ಷಗಳ ಬಂಪರ್ ಡಿಸ್ಕೌಂಟ್, 2 ವರ್ಷಗಳ ಫ್ರೀ ಸರ್ವಿಸ್

Tue, 02 Nov 2021-11:59 am,

ಓಲಾ ಕಾರ್ಸ್‌ನ ಸಿಇಒ ಅರುಣ್ ಸರ್ದೇಶ್ ಮುಖ್ ಮಾತನಾಡಿ, “ಈ ದೀಪಾವಳಿಯಲ್ಲಿ ಓಲಾ ಕಾರುಗಳು ಅನೇಕ ಉತ್ತಮ,  ಡೀಲ್‌ಗಳು ಮತ್ತು ಕೊಡುಗೆಗಳನ್ನು ನೀಡುತ್ತಿವೆ. ಹೊಸ ವಾಹನವನ್ನು ಖರೀದಿಸುವ ಅನುಭವಕ್ಕಿಂತಲೂ ಉತ್ತಮವಾದ ಅನುಭವವನ್ನು ನಾವು ನಮ್ಮ ಗ್ರಾಹಕರಿಗೆ ಒದಗಿಸುತ್ತೇವೆ ಎಂದಿದ್ದಾರೆ. ವಿಶೇಷವೆಂದರೆ ಇದಕ್ಕಾಗಿ ಅವರು ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ಈ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ  ಪಡೆಯಬಹುದು. 

ನೀವು ಇಲ್ಲಿ Ola ಅಪ್ಲಿಕೇಶನ್ ಮೂಲಕ ಹೊಸ ಮತ್ತು ಬಳಸಿದ ವಾಹನಗಳನ್ನು ಖರೀದಿಸಬಹುದು. ವಾಹನದ ಖರೀದಿಯಿಂದ ಹಣಕಾಸು, ನೋಂದಣಿ, ವಿಮೆ, ನಿರ್ವಹಣೆ ಮತ್ತು ಕಾರು ಸರ್ವಿಸ್ ನಂತಹ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಇಷ್ಟೇ ಅಲ್ಲ, ಗ್ರಾಹಕರು ತಮ್ಮ ವಾಹನವನ್ನು ಮತ್ತೆ ಓಲಾ ಕಾರ್‌ಗಳಿಗೆ ಮರುಮಾರಾಟ ಮಾಡಬಹುದು. ಅದೇನೆಂದರೆ, ಈಗ ಕಾರು ಕೊಳ್ಳುವ ಅಥವಾ ಮಾರುವ ಟೆನ್ಷನ್ ಇಲ್ಲ. ಯಾವುದೇ ತೊಂದರೆಯಿಲ್ಲದೆ ತಮ್ಮ ಕಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ನಿರ್ವಹಿಸಲು ಬಯಸುವ ಗ್ರಾಹಕರಿಗೆ ಇದು ಒಂದು ಸ್ಟಾಪ್ ಶಾಪ್ ಆಗಲಿದೆ.  

ಓಲಾ ಕಾರ್ಸ್ ತಿಂಗಳಲ್ಲೇ 5,000 ವಾಹನಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ಹೇಳಿದೆ. ಅಂದರೆ, ಜನರಲ್ಲಿ ಅದರ ಕ್ರೇಜ್ ಕಾಣಿಸುತ್ತಿದೆ. ಓಲಾ ಕಾರ್ಸ್ ಕಂಪನಿಯು 300 ಕೇಂದ್ರಗಳೊಂದಿಗೆ 100 ನಗರಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ, ಈ ಬಾರಿಯ ಕಾರ್ ಉತ್ಸವದಲ್ಲಿ ಕಾರು ಖರೀದಿಸಿದರೆ 1 ಲಕ್ಷದವರೆಗೆ ರಿಯಾಯಿತಿ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ 2 ವರ್ಷಗಳ ಕಾಲ ನಿಮ್ಮ ಕಾರಿನ ಫ್ರೀ ಸರ್ವಿಸ್ ,  12 ತಿಂಗಳ ವಾರಂಟಿ ಮತ್ತು 7 ದಿನಗಳ ರಿಟರ್ನ್ ಪಾಲಿಸಿ ಮುಂತಾದ ಹಲವು ಕೊಡುಗೆಗಳು ಕೂಡಾ ಸೇರಿವೆ.   

ಹಳೆಯ ಕಾರುಗಳು ಅಂದರೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಪ್ರೀ ಒನ್ದ್ ಕಾರು' ಎಂದು ಕರೆಯಲಾಗುತ್ತದೆ. ಅದೇನೆಂದರೆ, ಈ ಹಿಂದೆ ಒಮ್ಮೆ ಖರೀದಿಸಿ ಈಗ ಮತ್ತೆ ಮಾರಾಟವಾಗುತ್ತಿರುವ ಕಾರುಗಳು. ದೇಶದಲ್ಲಿ ಪೂರ್ವ ಸ್ವಾಮ್ಯದ ಕಾರುಗಳ ಮಾರುಕಟ್ಟೆಯು ಕೆಲವು ಸಮಯದಿಂದ ಬಹಳ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಜನರಿಗೆ ಕಡಿಮೆ ಬೆಲೆಗೆ ಒಳ್ಳೆಯ ಕಾರುಗಳು ಸಿಗುತ್ತವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link