Diwali 2022: ದೀಪಾವಳಿಯಂದು ಈ 6 ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ

Mon, 24 Oct 2022-10:37 am,

ಗೋಮತಿ ಚಕ್ರ: ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ಗೋಮತಿ ಚಕ್ರವನ್ನು ಸೇರಿಸಬೇಕು. ಆದ್ದರಿಂದ ದೀಪಾವಳಿಯಂದು 11 ಗೋಮತಿ ಚಕ್ರಗಳನ್ನು ಖರೀದಿಸಿ ಮನೆಗೆ ತನ್ನಿ. ಇದನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿ. ಇದರ ನಂತರ, ಮರುದಿನ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಇದರಿಂದ ಲಕ್ಷ್ಮಿಯ ಕೃಪೆ ಸದಾ ಉಳಿಯುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ.

ಲಕ್ಷ್ಮಿ-ಗಣೇಶ ಮೂರ್ತಿ: ದೀಪಾವಳಿ ದಿನದಂದು ಕೆಲವು ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವಿಗ್ರಹವಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ವಿಗ್ರಹವನ್ನು ತರುವಾಗ, ಅದು ಎಲ್ಲಿಯೂ ಒಡೆದಿರಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಒಡೆದ ವಿಗ್ರಹವನ್ನು ಪೂಜೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ.  

ಹೊಸ ಬಟ್ಟೆಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಗೆ ಹೊಸ ಬಟ್ಟೆಗಳನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶುಕ್ರದೇವನು ಪ್ರಸನ್ನನಾಗುತ್ತಾನೆ ಮತ್ತು ಆತನ ಆಶೀರ್ವಾದವು ಭಕ್ತರ ಮೇಲೆ ಉಳಿಯುತ್ತದೆ ಎಂದು ಹೇಳಲಾಗುತ್ತದೆ. 

ಶ್ರೀ ಮತ್ತು ಮಹಾಲಕ್ಷ್ಮಿ ಯಂತ್ರ: ಶ್ರೀ ಯಂತ್ರ ಅಥವಾ ಮಹಾಲಕ್ಷ್ಮಿ ಯಂತ್ರವು ಲಕ್ಷ್ಮಿಗೆ ತುಂಬಾ ಪ್ರಿಯವಾಗಿದೆ. ಇವುಗಳಿರುವ ಮನೆಯಲ್ಲಿ ಲಕ್ಷ್ಮಿ ದೇವಿಯ ವಾಸ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಯಂತ್ರಗಳನ್ನು ಪೂಜಿಸುವ ವಿಶೇಷ ಮಹತ್ವವನ್ನು ಲಕ್ಷ್ಮೀ ಪೂಜೆಯಲ್ಲಿ ಹೇಳಲಾಗಿದೆ. ಈ ಯಂತ್ರಗಳನ್ನು ಪೂಜಾ ಸ್ಥಳದಲ್ಲಿ ಇರಿಸಿ ಮತ್ತು ಪ್ರತಿದಿನ ಧೂಪದ್ರವ್ಯಗಳಿಂದ ಪೂಜಿಸಿ. ಹೀಗೆ ಮಾಡುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ ಎಂಬ ನಂಬಿಕೆ ಇದೆ.

ಕವಡೆ: ದೀಪಾವಳಿಯ ದಿನದಂದು ಕವಡೆಯನ್ನು ಖರೀದಿಸುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಇವುಗಳನ್ನು ಕೌರಿಗಳು ಎಂತಲೂ ಕರೆಯುವರು. ಕೌರಿಗಳಿಗೆ ಹಣವನ್ನು ಆಕರ್ಷಿಸುವ ಗುಣವಿದೆ ಎಂದು ಹೇಳಲಾಗುತ್ತದೆ. ದೀಪಾವಳಿ ಪೂಜೆಯ ಸಮಯದಲ್ಲಿ ಕವಡೆಗಳನ್ನು ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸುವುದು ಪ್ರಯೋಜನಕಾರಿ. ಮರುದಿನ, ಈ ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣವನ್ನು ಇರಿಸುವ ಸ್ಥಳದಲ್ಲಿ ಇರಿಸಿ.

ತೆಂಗಿನ ಕಾಯಿ: ದೀಪಾವಳಿಯಂದು ಮಾರುಕಟ್ಟೆಯಿಂದ ಒಂದು ತೆಂಗಿನಕಾಯಿಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಕಾಕ್ಷಿ ತೆಂಗಿನಕಾಯಿ ಮಾತೆ ಲಕ್ಷ್ಮಿಗೆ ಅತ್ಯಂತ ಪ್ರಿಯವಾದುದಾಗಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯಲ್ಲಿ ಈ ತೆಂಗಿನಕಾಯಿಯನ್ನು ಇಟ್ಟು ಪೂಜಿಸಿ. ಈ ರೀತಿ ಮಾಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ   ಧನ-ಧಾನ್ಯಗಳ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ  ನಂಬಿಕೆಗಳು ಮತ್ತು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link