ಈ ರೀತಿ ಚಾರ್ಜ್ ಮಾಡಿದ್ರೆ ನಿಮ್ಮ ಮೊಬೈಲ್ ಬಾಂಬ್‌ನಂತೆ ಸ್ಫೋಟಿಸಬಹುದು..!
ಸ್ಮಾರ್ಟ್‌ಫೋನ್ ಬಳಸುವಾಗ ಬ್ಯಾಟರಿಯ ಮೇಲೆ ಹೆಚ್ಚುವರಿ ಒತ್ತಡವಿರುತ್ತದೆ. ಇದು ಬ್ಯಾಟರಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಫೋನ್ ಹೆಚ್ಚು ಬಿಸಿಯಾಗಬಹುದು, ಇದು ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ಬ್ಯಾಟರಿಗೆ ಹಾನಿಯುಂಟು ಮಾಡಬಹುದು.
ರಾತ್ರಿಯಿಡೀ ಚಾರ್ಜ್ ಮಾಡುವುದರಿಂದ ಬ್ಯಾಟರಿಯು ಹೆಚ್ಚು ಚಾರ್ಜ್ ಆಗಬಹುದು. ಇದು ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಫೋನ್ ಬಿಸಿಯಾಗಬಹುದು, ಇದು ಸ್ಫೋಟದ ಅಪಾಯವನ್ನು ಹೆಚ್ಚಿಸುತ್ತದೆ.
ಅಧಿಕೃತವಲ್ಲದ ಚಾರ್ಜರ್‌ಗಳು ಭದ್ರತಾ ಮಾನದಂಡಗಳನ್ನು ಹೊಂದಿರುವದಿಲ್ಲ. ಒರಿಜಿನಲ್ ಚಾರ್ಜರ್ ಬದಲು ನೀವು ನಕಲಿ ಚಾರ್ಜರ್ ಬಳಸುವುದು ಫೋನ್‌ಗೆ ಹಾನಿಗೊಳಿಸುತ್ತದೆ. ಇದರಿಂದ ಬ್ಯಾಟರಿ ಬಿಸಿಯಾಗಬಹುದು, ಸ್ಫೋಟದ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಜನರು ತಮ್ಮ ಫೋನ್‌ಗಳನ್ನು ಸುರಕ್ಷಿತವಾಗಿಡಲು ದಪ್ಪವಾದ ಕೇಸ್‌ಗಳನ್ನು ಬಳಸುತ್ತಾರೆ. ಇದರಿಂದ ಒಳಗಿರುವ ಬಿಸಿಗಾಳಿ ಹೊರ ಬರಲು ಸಾಧ್ಯವಾಗುವುದಿಲ್ಲ. ಇದರಿಂದಲೂ ಸಹ ಫೋನ್ ಸ್ಫೋಟವಾಗುವ ಸಾಧ್ಯತೆ ಇರುತ್ತದೆ.
ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗುವವರೆಗೂ ಬಿಡುವುದು ಬ್ಯಾಟರಿಯ ಆರೋಗ್ಯಕ್ಕೆ ಹಾನಿಕಾರಕ. ನಿಮ್ಮ ಫೋನ್ ಬ್ಯಾಟರಿ 20%- 80% ಚಾರ್ಜ್ ಆಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಖಾಲಿಯಾಗುವವರೆಗೆ ಬ್ಯಾಟರಿ ಬಿಟ್ಟರೆ ಅದರಿಂದ ತೊಂದರೆ ಉಂಟಾಗುತ್ತದೆ.