ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ, ಸಮಸ್ಯೆಗಳ ಸರಮಾಲೆಯೇ ಎದುರಾಗಬಹುದು
ಮುರಿದ ಅಥವಾ ಒಡೆದ ಪಾತ್ರೆಗಳನ್ನು ಎಂದಿಗೂ ಬಳಸಬೇಡಿ ಅಥವಾ ಅಡುಗೆಮನೆಯಲ್ಲಿ ಇಡಬೇಡಿ. ಹಾಗೆ ಮಾಡಿದರೆ ವಿನಾಶಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಮುರಿದ ಪಾತ್ರೆಗಳು ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡುತ್ತವೆ.
ಅನೇಕ ಜನರು ಔಷಧಿಗಳು, ಬ್ಯಾಂಡೇಜ್ಗಳನ್ನು ಅಡುಗೆಮನೆಯಲ್ಲಿ ಇಡುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಹೊಂದಿರುವುದು ಮುಖ್ಯವಾಗಿರುತ್ತದೆ. ಆದರೆ ಇದನ್ನು ಅಡುಗೆಮನೆಯಲ್ಲಿ ಇಡುವ ತಪ್ಪನ್ನು ಮಾಡಬೇಡಿ. ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಔಷಧಿಗಳನ್ನು ಇಡುವುದರಿಂದ ಮನೆಯ ಮುಖ್ಯಸ್ಥರು ಯಾವಾಗಲೂ ಅನಾರೋಗ್ಯದಿಂದ ಇರುತ್ತಾರೆ.
ಕನ್ನಡಿಯನ್ನು ಸರಿಯಾದ ಜಾಗದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಆದರೆ ಅಡುಗೆಮನೆಯಲ್ಲಿ ಕನ್ನಡಿಯ ಬಳಕೆಯು ಮನೆಯ ನಾಶಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಅಡುಗೆಮನೆಯಲ್ಲಿ ಕನ್ನಡಿ ಹಾಕಬೇಡಿ. ಇದರಿಂದ ಮನೆಯಲ್ಲಿ ಜಗಳವೂ ಹೆಚ್ಚುತ್ತದೆ.
ಅಡುಗೆ ಮನೆಯಲ್ಲಿ ಬಳಸದ ವಸ್ತುಗಳನ್ನು ಇಡುವುದು ತಾಯಿ ಅನ್ನಪೂರ್ಣ ಕೋಪಕ್ಕೆ ಕಾರಣವಾಗಿದೆ. ಅಡುಗೆಮನೆಯಲ್ಲಿ ಯಾವಾಗಲೂ ಉಪಯುಕ್ತ ಮತ್ತು ಒಳ್ಳೆಯ ವಸ್ತುಗಳನ್ನು ಇರಿಸಿ. ಅಲ್ಲದೆ, ಅದನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ರಾತ್ರಿಯಿಡೀ ಅಡುಗೆಮನೆಯಲ್ಲಿ ಎಂಜಲು ಪಾತ್ರೆಗಳನ್ನು ಹಾಗೇ ಬಿಡುವುದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಉಳಿದ ಹಿಟ್ಟನ್ನು ಫ್ರಿಜ್ನಲ್ಲಿ ಇರಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಇದು ಅತ್ಯಂತ ಅಶುಭ ಎಂದು ಹೇಳಲಾಗಿದೆ. ಕಲಸಿದ ಹಿಟ್ಟನ್ನು ಬಳಸದೇ ಹಾಗೇ ಇಟ್ಟರೆ ಮನೆಯಲ್ಲಿ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.