ಹೊಟ್ಟೆಯ ಬೊಜ್ಜನ್ನು ಕರಗಿಸಲು ಮಾಡಿ ಈ ವ್ಯಾಯಾಮಗಳನ್ನು ..!
ಕ್ರಂಚಸ್ : ಕ್ರಂಚಸ್ ಅತ್ಯಂತ ಜನಪ್ರಿಯ ಕಿಬ್ಬೊಟ್ಟೆಯ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ನಿಮ್ಮ ಹೊಟ್ಟೆಯನ್ನು ಚಪ್ಪಟೆಯಾಗಿ ಮತ್ತು ಹೆಚ್ಚು ಟೋನ್ ಆಗಿ ಕಾಣಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವವರ ದೇಹದ ತೂಕ ಸಮತೋಲನದಲ್ಲಿರುತ್ತದೆ.
ಬರ್ಪೀಸ್ : ಬರ್ಪೀಸ್ ಮೆಗಾ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ದಿನವಿಡೀ ನಿಮ್ಮ ಚಯಾಪಚಯವನ್ನು ಕ್ರಿಯೆಯನ್ನು ವೇಗಗೊಳಿಸತ್ತದೆ. ಇದು ಫಿಟ್‌ನೆಸ್‌ಗೆ ಕಾರಣವಾದ ಉತ್ತಮ ವ್ಯಾಯಾಮವಾಗಿದೆ
ಮೌಂಟೇನ್ ಕ್ಲೈಂಬರ್ಸ್ : ಮೌಂಟೇನ್ ಕ್ಲೈಂಬರ್ಸ್ ಚುರುಕುತನವನ್ನು ಹೆಚಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇರಿಸಬಹುದು.
ಜಂಪಿಂಗ್ ಜ್ಯಾಕ್ಸ್ : ಜಂಪಿಂಗ್ ಜ್ಯಾಕ್ ಒಂದು ಪೂರ್ಣದೇಹದ ವ್ಯಾಯಾಮವಾಗಿದ್ದು ಅದು ಪ್ರಮುಖ ಸ್ನಾಯು ಗುಂಪುಗಳನ್ನು ಆರೋಗ್ಯಕರವಾಗಿರಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಮ್ಮ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
ಸ್ಕ್ವಾಟ್ ಮತ್ತು ಕಿಕ್ : ಈ ವ್ಯಾಯಾಮವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಬಲಪಡಿಸುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಅಂಗ ವ್ಯಾಯಾಮವಾಗಿದೆ.