ಸೆಕೆಗೆ ಬೆವರಿ ಮೇಕಪ್ ಹಾಳಾಗುತ್ತಿದೆಯೇ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಪ್ರೈಮರ್ ಬಳಸದೇ ಮೇಕಪ್ ಮಾಡಿಕೊಳ್ಳಬೇಡಿ: ಮೇಕಪ್ ಮಾಡಿಕೊಳ್ಳುವ ಪ್ರತಿಯೊಬ್ಬರು ಮೊದಲು ಮುಖಕ್ಕೆ ಪ್ರೈಮರ್ ಹಚ್ಚಬೇಕು. ಇದರಿಂದ ಮೇಕಪ್ ಬೇಗ ಹೋಗುವುದಿಲ್ಲ. ಅಲ್ಲದೇ ಪ್ರೈಮರ್‌ನ್ನು ಮೇಕಪ್ ಮಾಡಿಕೊಳ್ಳುವಾಗ ನಿಯಮಿತವಾಗಿ ಬಳಸಿದರೇ ಆಯಿಲ್ ಫೇಸ್‌ನಿಂದ ಮುಕ್ತಿ ಪಡೆದುಕೊಳ್ಳಬಹುದು.
ಬಳಸುವ ಮೇಕಪ್ ಐಟಮ್‌ಗಳೆಲ್ಲಾ ವಾಟರ್ ಫ್ರೂಪ್ ಇರಲಿ: ಮೇಕಪ್ ಐಟಮ್ಸ್‌ಗಳಾದ ಮಸ್ಕರಾ, ಕಾಜಲ್, ಲಿಪ್‌ಸ್ಟಿಕ್ ಇವೆಲ್ಲವೂ ವಾಟರ್‌ಫ್ರೂಪ್ ಆಗಿದ್ದರೆ, ನೀವು ಮಾಡಿಕೊಂಡ ಮೇಕಪ್ ಮುಖದ ಮೇಲೆ ದೀರ್ಘಕಾಲದವರೆಗೂ ಇರುತ್ತದೆ.
ಮೇಕಪ್ ಮ್ಯಾಟೆ ಫಿನಿಷ್ ಆಗಿರಲಿ: ಇತ್ತೀಚೆಗೆ ಗ್ಲೋಸಿ ಮತ್ತೆ ಸಖತ್ ಟ್ರೆಂಡ್ ಆಗುತ್ತಿದೆ. ಆದರೆ ಬೇಸಿಗೆಯಲ್ಲಿ ಮುಖಕ್ಕೆ ಮ್ಯಾಟೆ ಫಿನಿಷ್ ಮೇಕಪ್ ಸೂಕ್ತ. ಹೆಚ್ಚಿನ ಗ್ಲೋ ಬಯಸುವವರು ಬ್ಲಷ್ ಬಳಸಬಹುದು ಆದರೆ ಮೇಕಪ್ ಓವರ್ ಆಗದಂತೆ ನೋಡಿಕೊಳ್ಳಿ.
ವಾಟರ್ ಫ್ರೂಪ್ ಐ ಮೇಕಪ್ ಬಳಸಿ: ಬೇಸಿಗೆಯಲ್ಲಿ ಕಣ್ಣುಗಳಿಗೆ ಮೇಕಪ್ ಮಾಡುವಾಗ ವಾಟರ್ ಫ್ರೂಪ್ ಐ ಮೇಕಪ್ ಬಳಸುವುದು ಸೂಕ್ತ. ಏಕೆಂದರೆ ಇದರಿಂದ ಕಣ್ಣಿನ ಸುತ್ತಲೂ ಕಪ್ಪಾಗುವುದನ್ನು ತಡೆಯಬಹುದು.
ಸೆಟ್ಟಿಂಗ್ ಸ್ಪ್ರೇ ಬಳಸಿ: ಮೇಕಪ್ ಸಂಪೂರ್ಣವಾದ ಬಳಿಕ ಸೆಟ್ಟಿಂಗ್ ಸ್ಪ್ರೇ ಬಳಸಬೇಕು, ಇದರಿಂದ 8-10 ಗಂಟೆವರೆಗೂ ಮೇಕಪ್ ಹಾಗೆಯೇ ಇರುತ್ತದೆ.