Dhanu Sankranti: ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಧನು ಸಂಕ್ರಾಂತಿಯಂದು ತಪ್ಪದೇ ಮಾಡಿ ಈ ಕೆಲಸ
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸನಾತನ ಧರ್ಮದಲ್ಲಿ ಧನು ಸಂಕ್ರಾಂತಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 16 ಡಿಸೆಂಬರ್ 2023ರಂದು ಸೂರ್ಯ ದೇವನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ಧನು ಸಂಕ್ರಾಂತಿ ಎಂತಲೂ ಕರೆಯಲಾಗುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನು ಸಂಕ್ರಾಂತಿಯಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಸೂರ್ಯ ದೋಷ ನಿವಾರಣೆಯಾಗಿ ಜಾತಕದಲ್ಲಿ ಸೂರ್ಯ ಗ್ರಹ ಬಲಗೊಳ್ಳುತ್ತದೆ.
ಧನು ಸಂಕ್ರಾಂತಿಯ ದಿನ ಈ ನಾಲ್ಕು ಕ್ರಮ ಕೈಗೊಳ್ಳುವುದರಿಂದ ಸೂರ್ಯ ದೇವರ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅವುಗಳೆಂದರೆ...
ಪುಣ್ಯ ಸ್ನಾನ: ಧನು ಸಂಕ್ರಾಂತಿಯ ದಿನ ಪುಣ್ಯ ನದಿ ಸ್ನಾನ ಮಾಡಿ ಪವಿತ್ರ ನದಿಯ ನೀರನ್ನು ಸೂರ್ಯದೇವರಿಗೆ ಅರ್ಘ್ಯವಾಗಿ ಅರ್ಪಿಸಿ. ಈ ಸಮಯದಲ್ಲಿ, 'ಓಂ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ.
ಧನು ಸಂಕ್ರಾಂತಿಯ ದಿನ ಸೂರ್ಯ ಚಾಲೀಸಾ ಅಥವಾ ಸೂರ್ಯ ಕವಚ ಸ್ತೋತ್ರವನ್ನು ಪಠಿಸಿ, ಸೂರ್ಯನ 108 ನಾಮಗಳನ್ನು ಜಪಿಸಿ. ಇದರಿಂದ ಜೀವನದಲ್ಲಿ ಎದುರಾಗಿರುವ ಸಾಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ಧನು ಸಂಕ್ರಾಂತಿಯಂದು ಪುಣ್ಯ ನದಿ ಸ್ನಾನ, ಜಪತಪಗಳ ಬಳಿಕ ಕಪ್ಪು ಎಳ್ಳನ್ನು ಗಂಗಾಜಲದಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಿ. ಇದರಿಂದ ಜಾತಕದಲ್ಲಿ ಗ್ರಹ ದೋಷ ನಿವಾರಣೆಯಾಗುತ್ತದೆ.
ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಳಪಡಿಸಲು ಧನು ಸಂಕ್ರಾಂತಿಯ ದಿನ ಅಗತ್ಯವಿದ್ದವರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ. ನಿಮ್ಮಿಂದ ಒಬ್ಬರು ಸಂತೋಷಪಟ್ಟರೆ, ಸಮೃದ್ಧಿಯನ್ನು ಪಡೆದರೆ ನೀವೂ ಸಹ ಏಳ್ಗೆ ಹೊಂಡುತ್ತೀರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.