Coronavirus: ಮನೆಯಲ್ಲಿ ಯಾರಿಗಾದರೂ ಕರೋನಾ ಸೋಂಕು ತಗುಲಿದೆಯೇ? ಭಯಬಿಡಿ ಈ ರೀತಿ ನಿಗಾವಹಿಸಿ

Wed, 14 Apr 2021-8:50 am,

ನವದೆಹಲಿ: ಕರೋನಾ ಸಾಂಕ್ರಾಮಿಕವು ಇಡೀ ಜಗತ್ತಿನಲ್ಲಿ ತನ್ನ ಉಗ್ರ ಸ್ವರೂಪವನ್ನು ತೋರುತ್ತಿದೆ. ಪ್ರಪಂಚದಾದ್ಯಂತ ಕರೋನಾ ಪೀಡಿತ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದಿನೇ ದಿನೇ ದೇಶದ ಕರೋನಾ ಅಂಕಿಅಂಶಗಳು ಭಯ ಹುಟ್ಟಿಸುತ್ತವೆ. ಸಾವಿರಾರು ಜನರು ಈ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ. ಪ್ರತಿದಿನ 1.5 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ ಸೊಂಕುಗೆ ತುತ್ತಾಗುತ್ತಿದ್ದಾರೆ. ಇನ್ನೂ ವಿಶೇಷವಾದ ವಿಷಯವೆಂದರೆ ಸೋಂಕು ಪತ್ತೆಯಾದವರಲ್ಲಿ ಬಹುತೇಕ ಮಂದಿಗೆ ಯಾವುದೇ ಕರೋನಾ ಲಕ್ಷಣ ಇಲ್ಲದಿರುವುದು.  ಹಾಗಾಗಿ ನಿಮ್ಮಲ್ಲಿಯೂ ಯಾರಿಗಾದರೂ ಕರೋನಾ ಪಾಸಿಟಿವ್ ಆಗಿದ್ದು, ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ ಮನೆಯಲ್ಲಿಯೇ ಕ್ವಾರಂಟೈನ್ ಒಳ್ಳೆಯದು.  

ಮನೆಯಲ್ಲಿ ಕ್ವಾರಂಟೈನ್ (Home Quarantine) ಎಂದರೆ ಇಡೀ ಕುಟುಂಬದಲ್ಲಿ ಒಂದು ರೀತಿಯ ಉದ್ವಿಗ್ನತೆ ಹೆಚ್ಚಾಗುತ್ತದೆ. ಸೋಂಕಿತ ರೋಗಿಯನ್ನು ಒಂದು ರೀತಿಯ ಬಂಧನದಲ್ಲಿರಿಸಿದಂತಾಗುತ್ತದೆ.  ಆದರೆ ಅದೇ ಸಮಯದಲ್ಲಿ, ರೋಗಿಯ ಸರಿಯಾದ ಆರೈಕೆಯ ಅವಶ್ಯಕತೆಯಿದೆ. ಸರಿಯಾದ ಸಮಯಕ್ಕೆ ಆಹಾರ, ಬಿಸಿ ಆಹಾರದ ವ್ಯವಸ್ಥೆ ಕೂಡ ಅಗತ್ಯವಾಗಿದೆ.  ಕುಟುಂಬವು ಈ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಯಲ್ಲಿರುವ ಯಾವುದೇ ಕರೋನಾ ರೋಗಿಯನ್ನು ನೀವು ಹೇಗೆ ನೋಡಿಕೊಳ್ಳಬಹುದು, ಅದೂ ಕೂಡ ಈ ಕರೋನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುತ್ತಾ ಮನೆಯಲ್ಲಿರುವ ಕರೋನಾ ರೋಗಿಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ.

ಮನೆಯಲ್ಲಿ ಯಾರಾದರೂ ಕರೋನಾ ಸೋಂಕಿಗೆ ಒಳಗಾಗಿದ್ದರೆ, ಭಯಪಡಬೇಡಿ.  ಈ ಸಂದರ್ಭದಲ್ಲಿ, ಮನೆಯಲ್ಲಿ ಪ್ರತಿಯೊಬ್ಬರೂ ಡಬಲ್ ಮಾಸ್ಕ್ (Mask) ಅಥವಾ ಎನ್ -95 ಮಾಸ್ಕ್ ಬಳಸಬೇಕು ಮತ್ತು ಸೋಂಕಿತ ವ್ಯಕ್ತಿಯನ್ನು ಒಂದು ಪ್ರತ್ಯೇಕ ಕೋಣೆಯಲ್ಲಿ ಕ್ವಾರಂಟೈನ್ ನಲ್ಲಿರಿಸಿ. ನಿಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬ ವ್ಯಕ್ತಿಗೆ ಆಹಾರ ಮತ್ತು ಇತರ ವಸ್ತುಗಳನ್ನು ತಲುಪಿಸುವ ಜವಾಬ್ದಾರಿಯನ್ನು ನೀಡಿ. ಅವರಿಗೆ ಫೇಸ್‌ಶೀಲ್ಡ್ ವ್ಯವಸ್ಥೆ ಮಾಡಿ.

ನೀವು ಕರೋನಾ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದಾಗಲೆಲ್ಲಾ ತಪ್ಪದೇ ಸ್ಯಾನಿಟೈಜ್ ಮಾಡಿ. ಉದಾಹರಣೆಗೆ, ಕರೋನಾ ರೋಗಿಯ ಸಂಪರ್ಕಕ್ಕೆ ಬಂದಾಗಲೆಲ್ಲಾ ಸ್ಯಾನಿಟೈಜರ್ (Sanitizer) ಬಳಸಿ ಮೊದಲು ನಿಮ್ಮ ಕೈ ಸ್ವಚ್ಚಗೊಳಿಸಿ.  

ಇದನ್ನೂ ಓದಿ - Coronavirus: ಕರೋನಾದಿಂದ ರಕ್ಷಿಸಬಹುದಾದ ಹ್ಯಾಂಡ್ ಸ್ಯಾನಿಟೈಜರ್‌ಗಳಿಂದ ಕ್ಯಾನ್ಸರ್ ಅಪಾಯ

ಹತ್ತಿರದ ವೈದ್ಯಕೀಯ ಕೇಂದ್ರದಿಂದ ಪೊವಿಡೋನ್ ಅಯೋಡಿನ್ ಪಡೆಯಿರಿ. ಪೊವಿಡೋನ್ ಅಯೋಡಿನ್ ಅನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಗಾರ್ಗ್ಲ್ ಮಾಡಿ. ಇದು ಕರೋನದ ಆರಂಭಿಕ ಸೋಂಕನ್ನು ತಡೆಯುತ್ತದೆ.

ಪ್ರತಿಯೊಬ್ಬರೂ ಮನೆಯಲ್ಲಿ ಶೂ ಕವರ್ ಬಳಸಬೇಕು. ಮನೆಯಲ್ಲಿ ಕರೋನಾ ಸೋಂಕಿತರು ಇದ್ದಾಗ ಅಪ್ಪಿತಪ್ಪಿಯೂ ಬರಿಗಾಲಿನಲ್ಲಿ ನಡೆಯಬೇಡಿ. ಕಾಲಕಾಲಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಬಳಸಿ. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಆಹಾರದಲ್ಲಿನ ದ್ರವದ ಪ್ರಮಾಣವನ್ನು ಹೆಚ್ಚಿಸಿ. ಇದರೊಂದಿಗೆ, ವೈದ್ಯರ ಸಲಹೆಯ ಮೇರೆಗೆ ನೀವು ವಿಟಮಿನ್ ಬೂಸ್ಟರ್ ಅಥವಾ ವಿಟಮಿನ್ ಸಿ ಹೆಚ್ಚುವರಿ ಹಣ್ಣುಗಳನ್ನು ಬಳಸಬೇಕು.

ಇದನ್ನೂ ಓದಿ - Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಕರೋನಾ ಲಸಿಕೆಗೆ ಅರ್ಹರಾದ ಎಲ್ಲರೂ ತಪ್ಪದೇ ಲಸಿಕೆ ಪಡೆಯಿರಿ. ನೆನಪಿನಲ್ಲಿಡಿ, ಕರೋನಾ ಲಸಿಕೆ ಹಾಕಿದ ನಂತರ ಜ್ವರ, ಕೆಮ್ಮಿನಂತಹ ಕೆಲವು ಸಮಸ್ಯೆಗಳಿರಬಹುದು. ಆದರೆ ಅದಕ್ಕೆ ಹೆದರಬೇಡಿ. ಯಾವುದೇ ರೀತಿಯ ಸಮಸ್ಯೆಯಿದ್ದಲ್ಲಿ ಕೋವಿಡ್ ಸಹಾಯವಾಣಿಯಿಂದ ಸಹಾಯ ಪಡೆಯಿರಿ. ಸೋಂಕಿಗೆ ಒಳಗಾಗಿರುವ ಸಾಧ್ಯತೆ ಬಗ್ಗೆ ಕೊಂಚ ಅನುಮಾನವಿದ್ದರೂ ತಪ್ಪದೇ ಕರೋನಾ ಟೆಸ್ಟ್ ಮಾಡಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಿರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link