Indian Railways: ದೇಶದ ಮೊದಲ ರೈಲು, ಮೊದಲ ನಿಲ್ದಾಣ ಯಾವುದು ಗೊತ್ತಾ? ರೈಲ್ವೆ ಇತಿಹಾಸ ನೋಡಿದ್ರೆ ಶಾಕ್ ಆಗುತ್ತೀರಿ

Fri, 16 Dec 2022-11:15 am,

ಭಾರತದ ಮೊದಲ ರೈಲು 1837 ರಲ್ಲಿ ರೆಡ್ ಹಿಲ್ಸ್‌ನಿಂದ ಚಿಂತಾದ್ರಿಪೇಟೆ ಸೇತುವೆಯವರೆಗೆ 25 ಕಿಮೀ ದೂರವನ್ನು ಕ್ರಮಿಸಿತು. ಈ ರೈಲಿನ ನಿರ್ಮಾಣದ ಶ್ರೇಯಸ್ಸು ಸರ್ ಆರ್ಥರ್ ಕಾಟನ್ ಅವರಿಗೆ ಸಲ್ಲುತ್ತದೆ. ದೇಶದ ಮೊದಲ ರೈಲನ್ನು 16 ಏಪ್ರಿಲ್ 1853 ರಂದು ಬೋರಿ ಬಂದರ್ (ಮುಂಬೈ) ಮತ್ತು ಥಾಣೆ ನಡುವೆ ಸಾರ್ವಜನಿಕ ಸಾರಿಗೆಗಾಗಿ ಬಳಸಲಾಯಿತು. ಮೊದಲ ಬಾರಿಗೆ 400 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದರು. ಆ ಸಮಯದಲ್ಲಿ ಈ ದಿನವನ್ನು ಸಾರ್ವಜನಿಕ ರಜೆ ಎಂದು ಘೋಷಿಸಲಾಯಿತು.

ದಿಬ್ರುಗಢದಿಂದ ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ಸರಿಸುಮಾರು 4,286 ಕಿಮೀ ದೂರವನ್ನು ಕ್ರಮಿಸುತ್ತದೆ. ಈ ದೂರವನ್ನು ಕ್ರಮಿಸಲು ರೈಲು 82 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಈ ರೈಲು 57 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಇದು ದೇಶದ ಅತಿ ಉದ್ದದ ರೈಲು ಮಾರ್ಗವಾಗಿದೆ.

ದೇಶದ ಮೊದಲ ರೈಲ್ವೆ ಹಳಿಯನ್ನು 21 ಆಗಸ್ಟ್ 1847 ರಂದು ನಿರ್ಮಿಸಲಾಯಿತು. ಈ ಟ್ರ್ಯಾಕ್‌ನ ಉದ್ದ 56 ಕಿ.ಮೀ. ಈ ರೈಲ್ವೇ ಹಳಿಯನ್ನು ನಿರ್ಮಿಸಿದ ಮುಖ್ಯ ಇಂಜಿನಿಯರ್ ಜೇಮ್ಸ್ ಜಾನ್ ಬರ್ಕ್ಲಿ. 1853 ರಲ್ಲಿ, ಮೊದಲ ಪ್ಯಾಸೆಂಜರ್ ರೈಲು ಈ ಹಳಿಯಲ್ಲಿ ಓಡಿತು.

ದೊಡ್ಡ ರೈಲ್ವೇ ಜಂಕ್ಷನ್ ಎಂದರೆ ಅದು ಮಥುರಾ. ಮಥುರಾ ಜಂಕ್ಷನ್‌ನಿಂದ 7 ರೈಲು ಮಾರ್ಗಗಳಿವೆ. ಮಥುರಾ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿರುವ 10 ಪ್ಲಾಟ್ ಫಾರ್ಮ್ ಗಳನ್ನು ಹೊಂದಿದೆ.

ಮುಂಬೈನ ಬೋರಿ ಬಂದರ್ ಭಾರತದ ಮೊದಲ ರೈಲು ನಿಲ್ದಾಣವನ್ನು ಹೊಂದಿದೆ. ದೇಶದ ಮೊದಲ ರೈಲು ಬೋರಿ ಬಂದರ್‌ನಿಂದ ಥಾಣೆಗೆ 1853 ರಲ್ಲಿ ಓಡಿಸಲಾಯಿತು. ಈ ನಿಲ್ದಾಣವನ್ನು 1888 ರಲ್ಲಿ ವಿಕ್ಟೋರಿಯಾ ಟರ್ಮಿನಸ್ ಆಗಿ ಅಭಿವೃದ್ಧಿಪಡಿಸಲಾಯಿತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link