ನಿಂಬೆಹಣ್ಣನ್ನು ಸಿಪ್ಪೆಯೊಂದಿಗೆ ಸೇವಿಸುವುದರಿಂದ ಎಷ್ಟೆಲ್ಲಾ ಪ್ಯೋಜನೆಗಳಿವೆ ನಿಮಗೆ ಗೊತ್ತಾ..?
ನಿಂಬೆಹಣ್ಣನ್ನು ಸಿಪ್ಪೆಯೊಂದಿಗೆ ಸೇವಿಸುವುದರಿಂದ ಎಷ್ಟೆಲ್ಲಾ ಪ್ಯೋಜನೆಗಳಿವೆ ನಿಮಗೆ ಗೊತ್ತಾ..?
ನಿಂಬೆ ಹಣ್ಣು ಸೇವಿಸುವುದರಿಂದ ಎಷ್ಟೊಂದು ಆರೋಗ್ಯಕರ ಪ್ರಯೋಜನೆಗಳಿವೆ ಎಂದು ನಿಮಗೆಲ್ಲಾ ತಿಳಿದಿದೆ. ಆದರೆ ನಿಂಬೆ ಹಣ್ಣನ್ನು ಸಪ್ಪೆ ಸಮೇತ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಬನ್ನಿ ತಿಳಿಯೋಣ...
ನಿಂಬೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದೆ. ಇದರಿಂದ ಬಹಳಷ್ಟು ಪ್ರಯೋಜನೆಗಳು ಇದೆ. ನಿಂಬೆ ಹಣ್ಣಿನ ಸಿಪ್ಪೆ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಇದರಿಂದಾಗಿ ರಕ್ತ ನಾಳ ಹಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ.
ನಿಂಬೆಹಣ್ಣಿನ ಸಿಪ್ಪೆಯಲ್ಲಿ ನರಿಂಗಿನ್ ಹಾಗೂ ಹೆಸ್‌ಪಿರಿಡಿನ್ ಅಂಶಗಳು ಸಮೃದ್ಧವಾಗಿದೆ. ಇದರಿಂದಾಗಿ ಈ ಅಂಸಗಳು ದೇಹದಲ್ಲಿನ ಶುಗರ್ ಅಥವಾ ಸಕ್ಕರೆ ಮಟ್ಟವನ್ನು ಕಂಟ್ರೋಲ್ ನಲ್ಲಿಡಲು ಸಹಾಯ ಮಾಡುತ್ತದೆ.
ನಿಂಬೆ ಹಣ್ಣಿನ ಸಿಪ್ಪೆ ಡಿಯೋಸ್ಮಿನ್ ಹಾಗೂ ಹೆಸ್‌ಪಿರಿಡಿನ್ ಅಂಶಗಳನ್ನು ಹೊಂದಿದ್ದು. ಇದು ನಮ್ಮ ಕರುಳಿನಲ್ಲಿ ಉಂಟಾಗುವ ಗೆಡ್ಡೆಗಳನ್ನು ಕರಗಿಸಿ ಕ್ಯಾನ್ಸರ್ ಉಂಟಾಗದಂತೆ ನೋಡಿಕೊಳ್ಳುತ್ತದೆ.
ಲಿಮೋನಿನ್ ಅಂಶಗಳನ್ನು ನಿಂಬೆ ಹಣ್ಣಿನ ಸಿಪ್ಪೆ ಹೊಂದಿದೆ. ಇದರಿಂದಾಗಿ ಚರ್ಮದ ಕ್ಯಾನ್ಸರ್ ಸಮಸ್ಯೆಯನ್ನು ತಡೆಯಬಹುದು.
ನಿಂಬೆ ಹಣ್ಣಿನ ಸಿಪ್ಪೆ ಸೇವಿಸುವುದರಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳಬಹುದು. ಇದು ನಮ್ಮ ಹೊಟ್ಟೆಯ ಸುತ್ತಲೂ ಕೊಬ್ಬು ಉತ್ಪತ್ತಿಯಾಗದಂತೆ ತಡೆಯುತ್ತದೆ.
ಪಾಲಿಫಿನಾಲ್ ಅಂಶ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಹೆಚ್ಚಾಗಿ ಇರುವ ಕಾರಣ ಇದು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರೋಸ್ಟೆಟ್ ಕ್ಯಾನ್ಸರ್ ಎನ್ನುವ ಕಾಯಿಲೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ. ನಿಂಬೆ ಹಣ್ಣಿನ ಸಿಪ್ಪೆ ಸೇವಿಸುವ ಕಾರಣ ಗಡ್ಡೆಗಳನ್ನು ಕರಗಿಸಿ ಪ್ರೋಸ್ಟೆಟ್ ಕ್ಯಾನ್ಸರ್ ವಿರುದ್ಧ ಹೋರಾಡಿ ಸೆಲ್‌ಗಳನ್ನು ನಾಶ ಮಾಡುವಲ್ಲಿ ಸಹಾಯ ಮಾಡುತ್ತದೆ.