Google Secrets Tricks: ಗೂಗಲ್ ನ ಈ ಸೀಕ್ರೆಟ್ಸ್ ಬಗ್ಗೆ ಕೆಲವೇ ಮಂದಿಗಷ್ಟೇ ಗೊತ್ತು!
ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಆದರೆ, ಫೋನ್ ಇದ್ದು ನಿಮ್ಮ ಅದರಲ್ಲಿ ಇಂಟರ್ನೆಟ್ ಇಲ್ಲದಿದ್ದರೆ ಹೇಗಿರುತ್ತದೆ. ಆಗ ಟೈಮ್ ಪಾಸ್ ಮಾಡುವುದು ಹೇಗೆ. ಇದಕ್ಕೆ ಉತ್ತಮ ಮಾರ್ಗ ನಿಮ್ಮ ಗೂಗಲ್ ನಲ್ಲಿ ಲಭ್ಯವಾಗಲಿದೆ. ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲದಿದ್ದರೆ, ಸಮಯ ಕಳೆಯಲು Google ನ ಆಫ್‌ಲೈನ್ ಡೈನೋಸಾರ್ ಗೇಮ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಗೇಮ್ ನಿಮ್ಮ ಬ್ರೌಸರ್ ಪುಟದಲ್ಲಿ ಪ್ಲೇ ಮಾಡುವ ಸೌಲಭ್ಯವನ್ನು ನೀಡುತ್ತದೆ.
ಪುಟವು ಬದಿಗೆ ವಾಲುವ ವೈಶಿಷ್ಟ್ಯ: ಗೂಗಲ್ ನ ಸರ್ಚ್ ಬಾಕ್ಸ್ ನಲ್ಲಿ "Askew" ಎಂದು ಟೈಪ್ ಮಾಡಿ ಎಂಟರ್ ಬಟನ್ ಒತ್ತಿದರೆ ನಿಮ್ಮ ಪುಟವು ಒಂದು ಬದಿಗೆ ವಾಲುತ್ತದೆ. ಅಯ್ಯಯ್ಯೋ, ಇದೇನಾಯ್ತಪ್ಪ ಅಂತ ಚಿಂತಿಸಬೇಡಿ. ನೀವು ಹೊಸ ಪುಟಕ್ಕೆ ಹೋದ ತಕ್ಷಣ ಅದು ಸರಿಯಾಗುತ್ತದೆ.
ಗೂಗಲ್ ಆರ್ಬಿಟ್: ನಿಮ್ಮ ವೆಬ್ ಬ್ರೌಸರ್‌ನಲ್ಲಿ "ಗೂಗಲ್ ಆರ್ಬಿಟ್" ಎಂದು ಟೈಪ್ ಮಾಡಿ ಸರ್ಚ್ ಬಟನ್ ಕ್ಲಿಕ್ ಮಾಡಿರಿ. ಆಗ ನಿಮ್ಮ ಸರ್ಚ್ ರಿಸಲ್ಟ್ ನಲ್ಲಿ ಮೊದಲು "Google Sphere - Mr. Doob" ಎಂಬ ಕಾಮೆಂಟ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೋಮ್ ಪೇಜ್ ವೃತ್ತಾಕಾರದ ಮೂಲ ಸ್ಥಾನಕ್ಕೆ ತರುತ್ತದೆ, ಅಲ್ಲಿ ನೀವು ನಿಮ್ಮ ಮೌಸ್ ಅನ್ನು ಚಲಿಸಬಹುದು ಮತ್ತು ಭೂಮಿಯ ಸುತ್ತಲೂ ಚಲಿಸಬಹುದು. ಇದು ನಿಮಗೆ ಆಸಕ್ತಿದಾಯಕ ಸಂವಾದಾತ್ಮಕ ಅನುಭವವನ್ನು ನೀಡುತ್ತದೆ.
ಸಾಮಾನ್ಯವಾಗಿ ಏನಾದರೂ ಆಟವಾಡುವಾಗ ಟಾಸ್ ಹಾಕಲಾಗುತ್ತದೆ. ಆದರೆ, ಈ ಡಿಜಿಟಲ್ ಯುಗದಲ್ಲಿ ಎಲ್ಲಾ ಸಮಯದಲ್ಲೂ ಹಣ ಕೈಯಲ್ಲಿ ಇರುವುದಿಲ್ಲ. ಇದ್ದರೂ ನಾಣ್ಯ ಇರುವುದು ತುಂಬಾ ವಿರಳವೆಂದೇ ಹೇಳಬಹುದು. ಅಂತಹ ಸಂದರ್ಭದಲ್ಲಿ ನೀವು ಗೂಗಲ್ ನ ಸಹಾಯವನ್ನು ಪಡೆಯಬಹುದು. ಇದಕ್ಕಾಗಿ ಗೂಗಲ್ ಸರ್ಚ್ ಬಾಕ್ಸ್ ನಲ್ಲಿ "ಫ್ಲಿಪ್ ಕಾಯಿನ್" ಎಂದು ಟೈಪ್ ಮಾಡಿ ಎಂಟರ್ ಬಟನ್ ಒಟ್ಟಿರಿ. ನಾಣ್ಯದಂತೆ ಒಂದು ಬದಿಯಲ್ಲಿ ಹೆಡ್ ಇನ್ನೊಂದು ಬದಿಯಲ್ಲಿ ಟೈಲ್ ಕಾಣಿಸುತ್ತದೆ. ನಿಮಗೆ ಬೇಕಾದ ಕಡೆ ಕ್ಲಿಕ್ ಮಾಡುವ ಮೂಲಕ ಟಾಸ್ ಮಾಡಬಹುದು.
ಹಾವು-ಏಣಿ, ಲುಡೋದಂತಹ ಆಟವಾಡುವಾಗ ಡೈಸ್ ಬಹಳ ಮುಖ್ಯ. ಕೆಲವು ಬಾರಿ ಡೈಸ್ ಸಿಗದಿದ್ದಾಗ ಆಡುವ ಮನಸ್ಸಿದ್ದರೂ ಆಟವಾಡಲು ಸಾಧ್ಯವಾಗುವುದಿಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಗೂಗಲ್ ನಿಮಗೆ ರೋಲ್ ಎ ಡೈಸ್ ಆಯ್ಕೆಯನ್ನು ನೀಡುತ್ತದೆ. ಗೂಗಲ್ ಸರ್ಚ್ ಬಾಕ್ಸ್ ನಲ್ಲಿ "ರೋಲ್ ಎ ಡೈಸ್" ಎಂದು ಟೈಪ್ ಮಾಡಿ ಎಂಟರ್ ಕೊಟ್ಟರೆ ನೀವು ವರ್ಚುವಲ್ ಡೈಸ್ ಪಡೆಯಬಹುದು.