ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಮಾತೃಭಾಷೆ ಯಾವುದು ಗೊತ್ತಾ? ಹಿಂದಿ ಅಂತೂ ಅಲ್ಲ.. ಮತ್ಯಾವುದು!
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಅನೇಕರಿಗೆ ಬಹಳಷ್ಟು ತಿಳಿದಿರಬಹುದು. ಆದರೆ ಎಂದಾದರೂ ಅವರ ಮಾತೃಭಾಷೆ ಯಾವುದು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೀರಾ? ಇಲ್ಲವಾದಲ್ಲಿ ಈ ವರದಿಯನ್ನು ಓದಿ.
ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಸಾಲು ಸಾಲು ದಾಖಲೆಗಳನ್ನೇ ರಚಿಸುತ್ತಿರುವ ವಿರಾಟ್ ಆಧುನಿಕ ಕಾಲದಲ್ಲಿ ಕ್ರಿಕೆಟ್ ರಾಜ ಎಂದೇ ಪರಿಚಿತರಾಗಿದ್ದಾಗೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್, ಅಭಿಮಾನಿಗಳ ಪಾಲಿನ ದೇವರು.
ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಸ್ಥಿರ ಬ್ಯಾಟರ್‌ಗಳಲ್ಲಿ ಒಬ್ಬರು. ಬ್ಯಾಟ್ ಹಿಡಿದು ಕಣಕ್ಕಿಳಿದರೆ ಸಿಕ್ಸರ್-ಬೌಂಡರಿಗಳ ಸುರಿಮಳೆ ಖಚಿತ.
ಅಂದಹಾಗೆ ವಿರಾಟ್ ಕೊಹ್ಲಿ ಅವರ ಮಾತೃಭಾಷೆ ಯಾವುದು ಗೊತ್ತಾ? ಇಲ್ಲವಾದರೆ ಮುಂದೆ ಓದಿ. ದೆಹಲಿ ಮೂಲದ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ ಕೊಹ್ಲಿ ಅವರ ಮಾತೃಭಾಷೆ ಪಂಜಾಬಿ. ಹಿಂದಿ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿಯೇ ಮಾತನಾಡಿದರೂ, ಇಂದಿಗೂ ಮನೆಯಲ್ಲಿ ಪಂಜಾಬಿಯಲ್ಲೇ ಸಂವಹನ ಮಾಡುತ್ತಾರೆ ಎಂದು ಕೆಲ ವರದಿಗಳು ಹೇಳುತ್ತಿವೆ.