ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅಕ್ಕ ಯಾರು ಗೊತ್ತೇ? ತಂಗಿಯ ಪ್ರತಿಹೆಜ್ಜೆಗೂ ನೆರಳಾಗಿ ನಿಂತ ಈಕೆಯೂ ಭಾರತದ ಸ್ಟಾರ್ ಪ್ಲೇಯರ್ ಕೂಡ ಹೌದು
ದೇಶದ ಪ್ರಖ್ಯಾತ ಕ್ರೀಡಾಪಟು, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇದೇ ಡಿಸೆಂಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಡಬಲ್ ಒಲಿಂಪಿಕ್ ಪದಕ ವಿಜೇತೆಗೆ ಒಬ್ಬ ಅಕ್ಕ ಇದ್ದು ಆಕೆಯೂ ಖ್ಯಾತ ಆಟಗಾರ್ತಿ ಎಂಬುದು ನಿಮಗೆ ತಿಳಿದೆಯೇ?
ಪಿವಿ ಸಿಂಧು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ. ಐಟಿ ವೃತ್ತಿಪರರಾಗಿರುವ ಪಿವಿ ಸಿಂಧು ಇದೇ 22ರಂದು ಸಪ್ತಪದಿ ತುಳಿಯಲಿದ್ದು, ಉದಯಪುರದಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ.
ಆ ಬಳಿಕ ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವೂ ನಡೆಯಲಿದೆ. ಇನ್ನು ಸಿಂಧು ಅವರ ಅಕ್ಕ ಪಿವಿ ದಿವ್ಯಾ ಕೂಡ ಅಥ್ಲೀಟ್. ದಿವ್ಯಾ ಹ್ಯಾಂಡ್ ಬಾಲ್ ಆಟಗಾರ್ತಿಯಾಗಿದ್ದು, ಪಿವಿ ಸಿಂಧುಗಿಂತ ಏಳು ವರ್ಷ ದೊಡ್ಡವರು.
ರಾಷ್ಟ್ರಮಟ್ಟದ ಆಟಗಾರ್ತಿಯಾಗಿದ್ದ ಆಕೆ ಕ್ರೀಡೆಯನ್ನು ಅರ್ಧಕ್ಕೆ ನಿಲ್ಲಿಸಿ ವೈದ್ಯಕೀಯ ಶಿಕ್ಷಣ ಪಡೆದರು. ತರಗತಿಯಲ್ಲಿ ಟಾಪರ್ ಆಗಿದ್ದ ದಿವ್ಯಾ, ಅದೇ ಕಾರಣದಿಂದ ವೈದ್ಯಕೀಯ ಶಿಕ್ಷಣ ಪಡೆದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಪಿವಿ ದಿವ್ಯಾ 2012ರಲ್ಲಿ ಶ್ರೀರಾಮ್ ಗೊಲ್ಲ ಅವರನ್ನು ವಿವಾಹವಾಗಿದ್ದಾರೆ. ಆದರೆ ತನ್ನ ಸಹೋದರಿಯ ಮದುವೆಗೆ ಪಿವಿ ಸಿಂಧು ಆಗಮಿಸಲು ಸಾಧ್ಯವಾಗಿರಲಿಲ್ಲ. ಅದೇ ದಿನ ಪಿವಿ ಸಿಂಧು ಸೈಯದ್ ಮೇಧಿ ಇಂಟರ್‌ನ್ಯಾಶನಲ್ ಇಂಡಿಯಾ ಗ್ರ್ಯಾಂಡ್ ಫಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಿತ್ತು.
ಆದರೆ ಈ ಟೂರ್ನಮೆಂಟ್ ಗೆದ್ದು ಅಕ್ಕನಿಗೆ ಉಡುಗೊರೆಯಾಗಿ ನೀಡುತ್ತೇನೆ ಎಂದಿದ್ದ ಪಿವಿ ಸಿಂಧು, ದುರಾದೃಷ್ಟವಶಾತ್ ಇಂಡೋನೇಷ್ಯಾದಲ್ಲಿ ನಡೆದ ಈ ಪಂದ್ಯದಲ್ಲಿ ಸಿಂಧು ಸೋತಿದ್ದರು. ಇನ್ನು ಪಿವಿ ಸಿಂಧು ತನ್ನ ಅಕ್ಕನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.