ಅದೆಷ್ಟೇ ಅವಕಾಶಗಳಿದ್ದರೂ ʼಈʼ ಒಂದು ಕಾರಣಕ್ಕೆ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಲಿಲ್ಲವಂತೆ ಖ್ಯಾತ ನಟಿ ಭವ್ಯ!
ನಟಿ ಭವ್ಯ ಎಂತಹ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುವ ಅದ್ಭುತ ಕಲಾವಿದೆ.. ಮುಗ್ಧ ನಗು, ಆ ಸೌಂದರ್ಯದ ಮೂಲಕವೇ ಇಡೀ ಚಿತ್ರರಂಗದಲ್ಲಿ ಪಡ್ಡೆ ಹುಡುಗರ ಮನಗೆದ್ದ ಚೆಲುವೆಯಾಗಿದ್ದ ಇವರು ವಿಷ್ಣುವರ್ಧನ್, ಅಂಬರೀಷ್, ಅನಂತ್ನಾಗ್, ಶಂಕರ್ ನಾಗ್ ಹೀಗೆ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
ಹೀಗೆ ಸಿನಿಮಾರಂಗದ ದಿಗ್ಗಜರೊಂದಿಗೆ ತೆರೆಹಂಚಿಕೊಂಡ ಇವರು ಡಾ. ರಾಜ್‌ಕುಮಾರ್ ಅವರೊಂದಿಗೆ ಮಾತ್ರ ನಟಿಸಲು ಮನಸ್ಸು ಮಾಡಿರಲಿಲ್ಲವಂತೆ.. ಹಾಗಾದ್ರೆ ಅವರು ಈ ನಿರ್ಧಾರಕ್ಕೆ ಬಂದಿರಲು ಕಾರಣವೇನಿರಬಹುದು ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ..
ನಟಿ ಭವ್ಯ ಅವರ ಹೆಸರು ಹೇಳುತ್ತಿದ್ದಂತೆ ಸಾಕಷ್ಟು ಹಿಟ್ ಸಿನಿಮಾಗಳು ಕಣ್ಣು ಮುಂದೆ ಬರುತ್ತವೆ.. ತಮ್ಮ ಅಭುತಪೂರ್ವ ಅಭಿನಯದ ಮೂಲಕವೇ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡಿದ್ದ ನಟಿ ಇವರು.. ಆದರೆ ನಟಿ ರಾಜ್‌ಕುಮಾರ್ ಅವರೊಂದಿಗೆ ನಟಿಸಬೇಕು ಎಂದಾಗಲೆಲ್ಲ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಿದ್ದವಂತೆ..
ಹೌದು ಡಾಕ್ಟರ್ ರಾಜಕುಮಾರ್ ಅವರಿಗೆ ಆಗ 50 ವಯಸ್ಸು.. ಆದರೆ ನಟಿ ಭವ್ಯ ಅವರಿಗೆ ಕೇವಲ 20 ವರ್ಷ.. ಇಷ್ಟು ಚಿಕ್ಕ ಹುಡುಗಿಯನ್ನು ಅವರೊಂದಿಗೆ ಸಿನಿಮಾದಲ್ಲಿ ಹಾಕಿಕೊಂಡರೆ ಜನರು ಬೇರೆ ರೀತಿ ಭಾವಿಸುತ್ತಾರೆ ಎನ್ನುವುದು ಪಾರ್ವತಮ್ಮ ಅವರ ಅಭಿಪ್ರಾಯವಾಗಿತ್ತಂತೆ.. ಹೀಗಾಗಿ ನಟಿ ಭವ್ಯ ಹಾಗೂ ಡಾ. ರಾಜ್‌ಕುಮಾರ್ ಒಟ್ಟಿಗೆ ನಟಿಸಲು ಸಾಧ್ಯವಾಗಿಲ್ಲ..
ಅಲ್ಲದೇ ನಟಿ ಭವ್ಯ ಆಗಿನ ಕಾಲದಲ್ಲಿ ಹೆಚ್ಚು ಯುವ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದಿರುತ್ತಾರೆ.. ಆದರೆ ನಟ ರಾಜ್‌ಕುಮಾರ್ ಅವರು ಐತಿಹಾಸಿಕ ಪ್ರಬುದ್ಧ ಪಾತ್ರಗಳನ್ನು ಮಾಡುತ್ತಿದ್ದರು.. ಹೀಗಾಗಿ ಇವರಿಬ್ಬರ ಕ್ಯಾರೆಕ್ಟರ್ ಹೊಂದಾಣಿಕೆ ಆಗದ ಕಾರಣ ಭವ್ಯ ನಟ ರಾಜ್‌ಕುಮಾರ್ ಅವರೊಂದಿಗೆ ಯಾವ ಸಿನಿಮಾದಲ್ಲಿಯೂ ನಟಿಸಲಿಲ್ಲವಂತೆ..