ಚಂದ್ರಗ್ರಹಣದಲ್ಲಿ ಈ 4 ಪದಾರ್ಥಗಳನ್ನು ದಾನ ಮಾಡಿದರೆ ಅಷ್ಟೈಶ್ವರ್ಯ ಪ್ರಾಪ್ತಿ
ಅಕ್ಟೋಬರ್ 28, 2023ರ ರಾತ್ರಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಶರದ್ ಪೂರ್ಣಿಮಾದಂದು ಸಂಭವಿಸಲಿರುವ ಈ ಚಂದ್ರಗ್ರಹಣದ ದಿನ ಶುಭಕರ ಗಜಕೇಸರಿ ಯೋಗವೂ ನಿರ್ಮಾಣವಾಗಲಿದೆ.
ಗ್ರಹಣದ ಸಮಯದಲ್ಲಿ ದಾನ ಮಾಡುವುದನ್ನು ಪುಣ್ಯದ ಕೆಲಸ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ವಿಶೇಷವಾದ ನಾಲ್ಕು ವಸ್ತುಗಳನ್ನು ದಾನ ಮಾಡುವುದರಿಂದ ಹಲವು ಗಂಭೀರ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ದಿನ ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಇದರಿಂದ ಮಾನಸಿಕ ಶಾಂತಿ ಜೊತೆಗೆ ಅಪಾರ ಧನ-ಸಂಪತ್ತು, ಕೀರ್ತಿ ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ. ಹಾಗಿದ್ದರೆ, ಚಂದ್ರ ಗ್ರಹಣದಲ್ಲಿ ಯಾವೆಲ್ಲಾ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ತಿಳಿಯಿರಿ.
ಚಂದ್ರ ಗ್ರಹಣದ ದಿನ ಹಾಲನ್ನು ದಾನ ಮಾಡುವುದರಿಂದ ಜಾತಕದಲ್ಲಿ ಚಂದ್ರ ಬಲಗೊಳ್ಳಲಿದ್ದಾನೆ. ಅಷ್ಟೇ ಅಲ್ಲ, ಮಾತೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು.
ಹಾಲಿನಂತೆ ಅಕ್ಕಿ ಕೂಡ ಚಂದ್ರನಿಗೆ ಸಂಬಂಧಿಸಿದ ವಸ್ತುಗಳಲ್ಲಿ ಒಂದು. ಚಂದ್ರಗ್ರಹಣದ ದಿನ ಅಕ್ಕಿ, ಇಲ್ಲವೇ ಅಕ್ಕಿಯಿಂದ ತಯಾರಿಸಿದ ಖಾದ್ಯಗಳನ್ನು ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಬೆಳ್ಳಿ ಕೂಡ ಚಂದ್ರನಿಗೆ ಸಂಬಂಧಿಸಿದ ಪದಾರ್ಥವಾಗಿದೆ. ನಿಮಗೆ ಸಾಧ್ಯವಾದರೆ, ಚಂದ್ರಗ್ರಹಣದ ದಿನ ಬೆಳ್ಳಿಯನ್ನು ದಾನ ಮಾಡುವುದರಿಂದ ವ್ಯಕ್ತಿ ತೀಕ್ಷ್ಣ ಬುದ್ಧಿ, ಸಂಪತ್ತು, ಸಮೃದ್ಧಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ಚಂದ್ರಗ್ರಹಣದ ಬಳಿಕ ಸಕ್ಕರೆಯನ್ನು ದಾನ ಮಾಡುವುದರಿಂದ ಇಷ್ಟ ದೇವತೆಗಳು ಸಂತುಷ್ಟರಾಗಿ ಆಶೀರ್ವಾದ ಮಾಡುತ್ತಾರೆ. ಇದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಿ ಜೀವನದಲ್ಲಿ ಸಂತೋಷ-ಸಮೃದ್ಧಿ ತುಂಬಲಿದೆ ಎಂಬ ನಂಬಿಕೆಯಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.