ಹೋಲಿಕೆ ನನಗೆ ಇಷ್ಟವಿಲ್ಲ.. ಅದರಲ್ಲೂ ಕೊಹ್ಲಿ ಜೊತೆ ನನ್ನನ್ನು ಹೋಲಿಸಬೇಡಿ: ಸ್ಮೃತಿ ಮಂಧಾನ ಶಾಕಿಂಗ್ ಹೇಳಿಕೆ ವೈರಲ್
ಆರ್ ಸಿ ಬಿ ಪರ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದಿರುವ ಸ್ಮೃತಿ ಮಂಧಾನ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.
ಅಂದು ಮಹಿಳಾ ಪ್ರೀಮಿಯರ್ ಲೀಗ್ʼನಲ್ಲಿ ತನ್ನ ತಂಡವು ಪ್ರಶಸ್ತಿ ಜಯಿಸಿದ ಸಂದರ್ಭದಲ್ಲಿ ಮಾತನಾಡಿದ್ದ ಸ್ಮೃತಿ, ವಿರಾಟ್ ಕೊಹ್ಲಿ ಅವರ ಬೆಂಗಳೂರು ಫ್ರಾಂಚೈಸಿಗೆ ನೀಡಿದ ಕೊಡುಗೆಗಳನ್ನು ಕಡಿಮೆ ಅಂದಾಜು ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಮಂಧಾನ ನಾಯಕತ್ವದಲ್ಲಿ ಕಳೆದ ಬಾರಿ ಆರ್ ಸಿ ಬಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿತ್ತು. WPL ನ ಎರಡನೇ ಋತುವಿನಲ್ಲಿ ಚಾಂಪಿಯನ್ ಆಗುವ ಮೂಲಕ ವಿಶೇಷ ಸಾಧನೆಯನ್ನೇ ಮಾಡಿತ್ತು ಆರ್ ಸಿ ಬಿ. ಆದರೆ ಪುರುಷರ ತಂಡವು ಕಳೆದ 16 ವರ್ಷಗಳಲ್ಲಿ IPL ಪ್ರಶಸ್ತಿಯನ್ನು ಗೆಲ್ಲಲು ವಿಫಲವಾಗಿದೆ.
ಇನ್ನು ಈ ವಿಷಯದ ಬಗ್ಗೆ ಮಾತನಾಡದ್ದ ಮಂಧಾನ, "ಬಿರುದುಗಳು ಒಂದು ವಿಷಯವಷ್ಟೇ, ಆದರೆ ಅವರು (ಕೊಹ್ಲಿ) ದೇಶಕ್ಕಾಗಿ ಸಾಧಿಸಿರುವುದು ಗಮನಾರ್ಹ. ಹಾಗಾಗಿ ನನ್ನ ವೃತ್ತಿಜೀವನದಲ್ಲಿ ನಾನು ಇರುವ ಹಂತ ಮತ್ತು ಅವರು ಏನು ಸಾಧಿಸಿದ್ದಾರೆ ಎಂದು ನಾನು ಯೋಚಿಸುವುದಿಲ್ಲ. ಹೋಲಿಕೆ ಕೂಡ ನನಗಿಷ್ಟವಿಲ್ಲ. ಅದರಲ್ಲೂ ಕೊಹ್ಲಿ ಸಾಧನೆ ಜೊತೆ ನನ್ನ ಹೋಲಿಕೆ ಬೇಡ, ಏಕೆಂದರೆ ಅವರು ಸ್ಪೂರ್ತಿದಾಯಕ ವ್ಯಕ್ತಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ" ಎಂದಿದ್ದಾರೆ.
ಅಂದಹಾಗೆ, ಮಂಧಾನ ಮತ್ತು ಕೊಹ್ಲಿ ಇಬ್ಬರ ಜೆರ್ಸಿ ಸಂಖ್ಯೆಯೂ 18. ಇದರ ಬಗ್ಗೆಯೂ ಮಾತನಾಡಿದ ಅವರು, "ಈ ಆಧಾರದ ಮೇಲೆ ಇಬ್ಬರನ್ನು ಹೋಲಿಸುವುದು ಸರಿಯಲ್ಲ. ನಾನು ಇದನ್ನು ಜರ್ಸಿ ಸಂಖ್ಯೆ 18 ರ ಹೋಲಿಕೆ ಎಂದು ಕರೆಯುವುದಿಲ್ಲ. ಜರ್ಸಿ ಸಂಖ್ಯೆ ಕೇವಲ ವೈಯಕ್ತಿಕ ಆಯ್ಕೆಯಾಗಿದೆ. ನನ್ನ ಜನ್ಮದಿನವು 18 ಮತ್ತು ನನ್ನ ಜರ್ಸಿ ಸಂಖ್ಯೆ 18. ಇದು ಅವರು ಹೇಗೆ ಆಡುತ್ತಾರೆ ಮತ್ತು ನಾನು ಹೇಗೆ ಆಡುತ್ತೇನೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ" ಎಂದಿದ್ದಾರೆ.