ಮೊಸರಿನೊಂದಿಗೆ ಈ ನಾಲ್ಕು ವಸ್ತುಗಳನ್ನು ತಿಂದರೆ ಎದುರಾಗುತ್ತದೆ ಆರೋಗ್ಯ ಸಮಸ್ಯೆ
ಮಾವೂ ಮತ್ತು ಮೊಸರು ಬೆರೆಸಿ ಮಾಡಿದ ಲಸ್ಸಿ ಮತ್ತು ಸ್ಮೂಥಿ ತಿನ್ನಲು ಬಾಯಿ ರುಚಿ ಹೆಚ್ಚಿಸಬಹುದು. ಆದರೆ ಇದು ತಮ್ಮ ಆರೋಗ್ಯಕ್ಕೆ ಎಷ್ಟು ದೊಡ್ಡ ಅಪಾಯಕಾರಿ ಎನ್ನುವ ಮಾಹಿತಿ ನಮಗಿರುವುದಿಲ್ಲ. ತಜ್ಞರ ಪ್ರಕಾರ, ಮಾವು ಮತ್ತು ಮೊಸರಿನ ರುಚಿ ವಿಭಿನ್ನವಾಗಿದೆ ಮತ್ತು ಆದ್ದರಿಂದ ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಟಾಕ್ಸಿನ್ ಹೆಚ್ಚುತ್ತದೆ.
ಸಮುದ್ರಾಹಾರ ಪ್ರಿಯರು ಮೀನು ಮತ್ತು ಚಿಕನ್ ಅನ್ನು ಮ್ಯಾರಿನೇಟ್ ಮಾಡಿ ನಂತರ್ ಬೇಯಿಸಿ ತಿನ್ನುತ್ತಾರೆ. ಆದರೆ, ಮೊಸರಿನೊಂದಿಗೆ ಮೀನನ್ನು ಸೇವಿಸುವುದರಿಂದ ಹಲವಾರು ರೋಗಗಳು ಬರುತ್ತವೆ. ಮೀನಿನಲ್ಲಿ ಪ್ರೋಟೀನ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಮೊಸರಿನಲ್ಲಿ ಕೂಡಾ ಪ್ರೋಟೀನ್ ಕಂಡುಬರುತ್ತದೆ. ಪ್ರೋಟೀನ್ ಅನ್ನು ಅಧಿಕವಾಗಿ ಸೇವಿಸಿದಾಗ, ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಮತ್ತು ಹೊಟ್ಟೆ ನೋವು ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಲವರಿಗೆ ಬಿಸಿ ಬಿಸಿ ಪುಲಾವ್ ಅಥವಾ ಪರಾಠಗಳೊಂದಿಗೆ ಮೊಸರು ಬಜ್ಜೆ ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಮೊಸರು, ಟೊಮೇಟೊ, ಈರುಳ್ಳಿ, ಸೌತೆಕಾಯಿಯಂತಹ ಆರೋಗ್ಯಕರ ತರಕಾರಿಗಳಿಂದ ಮಾಡಿದ ಮೊಸರುಬಜ್ಜಿ ಇದ್ದರಂತೂ ಉಉತಕ್ಕೆ ಇನ್ನೇನು ಬೇಡ. ಇದರಿಂದ ದೇಹಕ್ಕೆ ತಂಪು ಸಿಗುತ್ತದೆ. ತಿನ್ನಲು ರುಚಿಕರವಾಗಿದ್ದರೂ, ಈ ರೀತಿ ಈರುಳ್ಳಿ ಮತ್ತು ಮೊಸರು ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈರುಳ್ಳಿಯ ಪರಿಣಾಮವು ಉಷ್ಣವಾಗಿರುತ್ತದೆ ಮತ್ತು ಮೊಸರಿನ ಪರಿಣಾಮವು ತಂಪಾಗಿರುತ್ತದೆ. ಆದ್ದರಿಂದಲೇ ಇವೆರಡನ್ನು ಒಟ್ಟಿಗೆ ಸೇವಿಸಿದಾಗ ದೇಹದಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. ಇದರಿಂದ ತುರಿಕೆ, ಸೋರಿಯಾಸಿಸ್ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು.
ಉದ್ದಿನಬೇಳೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಇದನ್ನು ಮೊಸರಿನ ಜೊತೆಗೆ ಸೇವಿಸಿದರೆ, ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಉದ್ದಿನಬೇಳೆ ಮತ್ತು ಮೊಸರನ್ನು ಒಟ್ಟಿಗೆ ತಿಂದರೆ ಹೊಟ್ಟೆನೋವು, ಅತಿಸಾರ, ವಾಯು ಮೊದಲಾದ ಕಾಯಿಲೆಗಳು ಬರಬಹುದು.