ಖಾಲಿ ಹೊಟ್ಟೆಯಲ್ಲಿ ಈ ಆಹಾರ ವಸ್ತುಗಳನ್ನು ತಿಂದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ

Wed, 07 Dec 2022-12:10 pm,

ಟೊಮ್ಯಾಟೋವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಏಕೆಂದರೆ ಇದರಲ್ಲಿರುವ ಗ್ಯಾಸ್ಟ್ರೋಇನ್ ಟೆಸ್ಟೈಲ್ ಹೊಟ್ಟೆಯಲ್ಲಿ  ಆಸಿಡ್, ಗ್ಯಾಸ್, ಕಿಡ್ನಿ ಸ್ಟೋನ್ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.  

ಹಾಲು ಮತ್ತು ಬಾಳೆಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದರಿಂದ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಇದು ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಕೂಡಾ ತಂದೊಡ್ಡಬಹುದು.   

ತಂಪು ಪಾನೀಯವನ್ನು ಸೇವಿಸುವ ಮೂಲಕ ಯಾವುದೇ ಕಾರಣಕ್ಕೂ ನಿಮ್ಮ ದಿನದ ಆರಂಭವನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. 

ಮಸಾಲೆಯುಕ್ತ ಆಹಾರ ತಿನ್ನಲು ಬಲು ರುಚಿ. ಆದರೆ ಇದನ್ನೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಅದು ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು.    

ಈ ಋತುವಿನಲ್ಲಿ ಸಿಹಿ ಗೆಣಸು ಹೇರಳವಾಗಿ ಸಿಗುತ್ತದೆ. ಸಿಹಿ ಗೆಣಸು ಆರೋಗ್ಯಕ್ಕೆ ಅತ್ಯಂತ ಪ್ರಯೋಜನ ನೀಡುವ ಪದಾರ್ಥವಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಈ ಹಣ್ಣನ್ನು ತಿನ್ನಬಾರದು. ಏಕೆಂದರೆ ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link