ಬೆಳಗ್ಗೆ ಎದ್ದಕೂಡಲೇ ಅಪ್ಪಿತಪ್ಪಿಯೂ ಇವುಗಳನ್ನು ನೋಡಬೇಡಿ; ದಾರಿದ್ರ್ಯ & ಬಡತನ ನಿಮ್ಮನ್ನು ಹುಡುಕಿಕೊಂಡು ಬರುತ್ತೆ!
ಬೆಳಗ್ಗೆ ಎದ್ದ ತಕ್ಷಣ ಏನು ಮಾಡ್ತೀರಿ ಅಂತಾ ಅನೇಕರು ಕೇಳುತ್ತಿರುತ್ತಾರೆ. ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ಬೆಳಗ್ಗೆ ಹಾಸಿಗೆಯಿಂದ ಎದ್ದ ಬಳಿಕ ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಕೆಲ ಕೆಲಸ ಮಾಡಬಾರದು. ಕೆಲವೊಮ್ಮೆ ನೀವು ಮಾಡುವ ಕೆಲಸದಿಂದಲೇ ದಾರಿದ್ರ್ಯ & ಬಡತನ ನಿಮ್ಮನ್ನು ಹುಡುಕೊಂಡು ಬರುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಯಾವ ಕೆಲಸ ಮಾಡಬೇಕು? ಅಥವಾ ಯಾವ ಕೆಲಸ ಮಾಡಬಾರದು? ಅನ್ನೋದರ ಬಗ್ಗೆ ತಿಳಿಯುವುದು ಮುಖ್ಯ...
ಪ್ರತಿದಿನ ಬೆಳಗ್ಗೆ ನಾವು ಮಾಡುವ ಕೆಲಸಗಳು ನಮಗೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತವೆ ಅಂತಾ ವಾಸ್ತುಶಾಸ್ತ್ರ ಹೇಳುತ್ತದೆ. ನಾವು ಬೆಳಗ್ಗೆ ಎದ್ದು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಸಂಪೂರ್ಣ ದಿನವನ್ನೇ ಹಾಳುಮಾಡುವುದಲ್ಲದೆ, ನಮಗೆ ಕೆಟ್ಟ ಫಲಗಳನ್ನುಂಟು ಮಾಡುತ್ತದೆ ಎಂದು ವಾಸ್ತುಶಾಸ್ತ್ರವು ಎಚ್ಚರಿಸುತ್ತದೆ.
ಜ್ಯೋತಿಷ್ಯ ಹಾಗೂ ವಾಸ್ತುವಿನಲ್ಲಿ ನಂಬಿಕೆ ಇರಿಸುವವರು ನಮ್ಮಲ್ಲಿ ತುಂಬಾ ಕಡಿಮೆ. ಇದನ್ನೆಲ್ಲಾ ಮೂಢನಂಬಿಕೆ ಎಂದೇ ಅನೇಕರು ವಾದಿಸುತ್ತಾರೆ. ಆದರೆ ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರವು ತಿಳಿಸುವ ಕೆಲವೊಂದು ಸಲಹೆಗಳನ್ನು ವಿಜ್ಞಾನ ಸಹ ಗೌರವಿಸುತ್ತದೆ ಎಂದು ಹೇಳಲಾಗಿದೆ. ಕೆಲವೊಂದು ಅಂಶಗಳು ವೈಜ್ಞಾನಿಕವಾಗಿ ನಿಜವೆಂದು ಸಾಬೀತಾಗಿರುವುದೇ ಇದಕ್ಕೆ ಕಾರಣ.
ಬಹುತೇಕರು ಬೆಳಗ್ಗೆ ಎದ್ದೊಡನೆ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಾರೆ. ಇದು ಕೆಟ್ಟದ್ದು ಎಂದು ತಿಳಿಸುವ ವಾಸ್ತುಶಾಸ್ತ್ರವು ಇದರಿಂದ ದುರಾದೃಷ್ಟ ಉಂಟಾಗುತ್ತದೆ ಎಂದು ಎಚ್ಚರಿಸುತ್ತದೆ. ಹೀಗಾಗಿ ಬೆಳಗ್ಗೆ ಎದ್ದೊಡನೆ ಕನ್ನಡಿ ನೋಡುವ ಅಭ್ಯಾಸ ನಿಮಗಿದ್ದಲ್ಲಿ ಅದನ್ನು ಇಂದೇ ಬಿಟ್ಟುಬಿಡಿ. ಬೆಳಗ್ಗೆ ಎದ್ದೊಡನೆ ದೇವರನ್ನು ನೆನೆದು ದಿನವನ್ನು ಆರಂಭಿಸಿ ಎಂದು ವಾಸ್ತು ಸಲಹೆ ನೀಡುತ್ತದೆ.
ಬೆಳಗ್ಗೆ ಎದ್ದೊಡನೆ ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡುವುದು ದಿನಪೂರ್ತಿ ನಮಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಇನ್ನು ಕೆಲಸ ಮಾಡದೇ ಇರುವ ಅಂದರೆ ನಿಂತ ಗಡಿಯಾರವನ್ನು ಅಪ್ಪಿತಪ್ಪಿಯೂ ನೋಡಬಾರದು. ಇದರಿಂದ ಮುಂದೆ ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ಆರಂಭವಾಗುತ್ತದೆ ಎಂದು ಹೇಳಲಾಗಿದೆ.
ಕೆಲಸ ಮಾಡದೇ ಇರುವ ಗಡಿಯಾರ ನಿಮ್ಮ ಮನೆಯಲ್ಲಿದ್ದರೆ ಬೆಳಗ್ಗೆ ಎದ್ದು ಅದರತ್ತ ದೃಷ್ಟಿ ಸಹ ಹಾಯಿಸಬಾರದು ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಇದು ದುರಾದೃಷ್ಟದ ಸಂಕೇತವಾಗಿದೆ ಎಂದು ವಾಸ್ತುಶಾಸ್ತ್ರ ಸೂಚಿಸುತ್ತದೆ. ಇದು ನಿಮ್ಮ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ನಂಬಲಾಗಿದೆ.