ಬಿಗ್ ಬಾಸ್ನಿಂದ ಇಂದೇ ಹೊರ ಬರ್ತಾರಾ ಈ ಸ್ಪರ್ಧಿ! ನಾಮಿನೇಟ್ ಆದ ಎಂಟು ಜನರಲ್ಲಿ ಔಟ್ ಆಗೋದು ಯಾರು?
Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಮನೆಯಿಂದ ಹೊರಬರಲು ಎಂಟು ಜನರು ನಾಮಿನೇಟ್ ಆಗಿದ್ದಾರೆ. ಕೇವಲ ಇಬ್ಬರೇ ಸೇಫ್ ಆಗಿದ್ದಾರೆ.
ಬಿಗ್ ಬಾಸ್ ನಲ್ಲಿ 13 ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಸದ್ಯ ಹತ್ತು ಜನ ಉಳಿದುಕೊಂಡಿದ್ದಾರೆ.
ಈ ವಾರ ಮಂಜು, ಧನರಾಜ್, ಹನುಮಂತ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ, ತ್ರಿವಿಕ್ರಂ ಹಾಗೂ ಐಶ್ವರ್ಯಾ ನಾಮಿನೇಟ್ ಆಗಿದ್ದಾರೆ. ಭವ್ಯಾ ಮತ್ತು ರಜತ್ ಸೇಫ್ ಆಗಿದ್ದಾರೆ.
ಈ ವಾರ ನಾಮಿನೇಟ್ ಆದ ಎಂಟು ಮಂದಿ ಪೈಕಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಬರಬಹುದು ಎನ್ನಲಾಗುತ್ತಿದೆ.
ಇನ್ನೂ ಕೆಲವೇ ವಾರಗಳು ಫಿನಾಲೆಗೆ ಬಾಕಿ ಇರುವ ಕಾರಣ ಡಬಲ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ. ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಎಲ್ಲ ಊಹಾಪೋಹಗಳಿಗೂ ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ನಲ್ಲಿ ಉತ್ತರ ಸಿಗಲಿದೆ. ಯಾರು ಆಚೆ ಬರ್ತಾರೆ ಯಾರು ಸೇಫ್ ಆಗ್ತಾರೆ ಎಂದು ಕಾದು ನೋಡಬೇಕಿದೆ.