ಡಾ.ರಾಜ್‌ 94ನೇ ಜನ್ಮದಿನ : ಅಣ್ಣಾವ್ರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳಿವು

Mon, 24 Apr 2023-4:17 pm,

ಏಪ್ರಿಲ್ 24, 1929 ರಂದು ತಮಿಳುನಾಡಿನ ಗಾಜನೂರು ಗ್ರಾಮದಲ್ಲಿ ರಾಜ್‌ಕುಮಾರ್‌ ಅವರು ಜನಿಸಿದರು. ಅವರ ಮೊದಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಎಂದು.

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರು ಡಾ. ರಾಜ್‌ಕುಮಾರ್‌ ಅವರ ತಂದೆ. ಇವರು ʼಗುಬ್ಬಿ ವೀರಣ್ಣʼ ನಾಟಕ ಕಂಪನಿಯಲ್ಲಿ ಕಲಾವಿದರಾಗಿದ್ದರು.

ಕೇವಲ 3ನೇ ತರಗತಿಯವರೆ ಮಾತ್ರ ಅಧ್ಯಯನ ಮಾಡಿರುವ ಮುತ್ತುರಾಜ್ ಶಾಲೆಯನ್ನು ತೊರೆದರು ತಂದೆಯನ್ನು ಅನುಸರಿಸಿ ಕಲಾ ಸೇವೆಗೆ ನಿಂತರು.

ಅವರು 1942 ರಲ್ಲಿ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಬಾಲ ಕಲಾವಿದರಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು.

1952 ರಲ್ಲಿ 'ಶ್ರೀ ಶ್ರೀನಿವಾಸ ಕಲ್ಯಾಣ'ದಲ್ಲಿ ಪವಿತ್ರ ಸಪ್ತ ಮುನಿಗಳಲ್ಲಿ ಒಬ್ಬರಾದ ಅಗಸ್ತ್ಯ ಋಷಿಯಾಗಿ ಕಾಣಿಸಿಕೊಂಡರು.

ಡಾ.ರಾಜ್‌ ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಆದ್ರೆ, ವಿಶೇಷ ಅಂದ್ರೆ ಯಾವುದೇ ಸಿನಿಮಾದಲ್ಲಿ ಖಳನಾಯಕ ಪಾತ್ರ ನಿರ್ವಹಿಸಿಲ್ಲ.

ಅಣ್ಣಾವ್ರುನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ 109 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಬಿಡುಗಡೆ ಮಾಡಿದ್ದ.

ಕನ್ನಡ ಚಲನಚಿತ್ರಗಳ ಇತಿಹಾಸದಲ್ಲಿ ಏಕೈಕ ಇಂಗ್ಲಿಷ್ ಹಾಡನ್ನು ರಾಜ್‌ಕುಮಾರ್‌ ಅವರು ಹಾಡಿದ್ದಾರೆ ಎಂದು ಹೇಳಲಾಗುತ್ತದೆ. ಅದು 1978ರಲ್ಲಿ ಬಿಡುಗಡೆಯಾದ ʼಆಪರೇಷನ್ ಡೈಮಂಡ್ ರಾಕೆಟ್‌ʼ ಚಿತ್ರದಲ್ಲಿ. 

ಏಪ್ರಿಲ್ 12, 2006 ರಂದು ಕಲಾರಸಿಕ, ಪದ್ಮಭೂಷಣ, ವರನಟ, ನಟಸಾರ್ವಭೌಮ ಡಾ. ರಾಜಕುಮಾರ್‌ ಅವರು ನಿಧನರಾದರು. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link