ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದ ದೊಡ್ಮನೆ ಹಿರಿಮಗ ಶಿವರಾಜ್ ಕುಮಾರ್ ಮತ್ತು ಹಿರಿಸೊಸೆ ಗೀತಾ... ಇವರ ಹೆಸರಲ್ಲಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಚಿಕಿತ್ಸೆಗಾಗಿ ನಟ ಡಾ ಶಿವರಾಜ್ ಕುಮಾರ್ ಅವರು ಇಂದು ಅಮೆರಿಕಾಗೆ ತೆರಳುತ್ತಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಲೆಂದು ಕಿಚ್ಚ ಸುದೀಪ್ ಸೇರಿದಂತೆ ಹಲವರು ಗಣ್ಯರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಇನ್ನು ಶಿವರಾಜ್ ಕುಮಾರ್ ಜೊತೆಗೆ ಅವರ ಪತ್ನಿ ಗೀತಾ ಕೂಡ ಅಮೆರಿಕಾಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಿವಣ್ಣ, "ಟ್ರೀಟ್ಮೆಂಟ್ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಮುಗಿದಿದ್ದು ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ಇದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎಂಬ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ಫುಲ್ ಫಾರ್ಮ್ ಶಿವಣ್ಣ ಬರ್ತಾರೆ" ಎಂದು ಹೇಳಿದ್ದರು. ಇದೀಗ ಶಿವಣ್ಣ ಅಮೇರಿಕಾಗೆ ಚಿಕಿತ್ಸೆಗೆಂದು ಇಂದು ತೆರಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ದೊಡ್ಮನೆ ಹಿರಿಮಗ ಶಿವರಾಜ್ ಕುಮಾರ್ ಮತ್ತು ಹಿರಿಸೊಸೆ ಗೀತಾ ಅವರ ಆಸ್ತಿ ವಿಚಾರವೂ ಮುನ್ನೆಲೆಗೆ ಬಂದಿದ್ದು, ಅಪಾರ ಸಂಪತ್ತಿನ ಒಡೆಯರಾಗಿದ್ದಾರೆ ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೀತಾ ಶಿವರಾಜ್‌ಕುಮಾರ್ ಅವರು, ಶಿವಮೊಗ್ಗದಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿದ್ದರು. ಆ ಸಂದರ್ಭದಲ್ಲಿ ದಂಪತಿಯ ಆಸ್ತಿ ವಿವರ ಬಹಿರಂಗವಾಗಿತ್ತು.
62ರ ವಯಸ್ಸಲ್ಲೂ ಸಖತ್ ಹ್ಯಾಂಡ್‌ಸಂ ಆಗಿ ನಟಿಸುವ ಶಿವಣ್ಣ, ಪ್ರತಿ ಸಿನಿಮಾಗೂ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ. ಅಂದಹಾಗೆ ಶಿವಣ್ಣನ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ. ಈ ಹೆಸರಿನಲ್ಲಿಯೇ ಆದಾಯದ ದಾಖಲೆಗಳನ್ನು ಕೂಡ ನೀಡಲಾಗಿದೆ.
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್ ಕುಮಾರ್ ಪತ್ನಿ, ಮಾಜಿ ಸಿಎಂ ದಿ. ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಅವರು ಬರೋಬ್ಬರಿ 40.04 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಪತಿ ಶಿವರಾಜ್ ಕುಮಾರ್ ಬಳಿ 49 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದರು. ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಹೇಳಿದ್ದಾರೆ.
2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ ಈ ದಂಪತಿ. ಗೀತಾ ಶಿವರಾಜ್ ಕುಮಾರ್ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದ್ದು, ಗೀತಾ ಶಿವರಾಜ್ ಕುಮಾರ್ ಕೈಯಲ್ಲಿ 2 ಲಕ್ಷ ರೂಪಾಯಿ ಹಣವಿದೆ. ಇನ್ನುಳಿದಂತೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಪತಿ-ಪತ್ನಿ ಕೋಟ್ಯಂತರ ರೂ. ಠೇವಣಿ ಹೊಂದಿದ್ದಾರೆ
ಮುತ್ತು ಸಿನಿ ಸರ್ವೀಸಸ್‌ಗೆ ಗೀತಾ ಶಿವರಾಜ್ ಕುಮಾರ್ 25.60 ಲಕ್ಷ ರೂ. ಸಾಲ ನೀಡಿದ್ದರೆ, ಶಿವರಾಜ್ ಕುಮಾರ್ 1.64 ಕೋಟಿ ರೂ. ಸಾಲ ನೀಡಿದ್ದಾರೆ. ಗೀತಾ ಪಿಕ್ಚರ್ಸ್‌ಗೆ ಶಿವಣ್ಣ 6 ಕೋಟಿ ರೂ. ಸಾಲ ನೀಡಿದ್ದರೆ, ಇತರರಿಗೆ 2.13 ಕೋಟಿ ರೂ. ಕೈ ಸಾಲ ನೀಡಿದ್ದಾರೆ.
ಇನ್ನುಳಿದಂತೆ ಗೀತಾ ಅವರ ಬಳಿ 1.07 ಕೋಟಿ ರೂ. ಮೊತ್ತದ ಟೊಯೋಟಾ ಹೈಬ್ರಿಡ್ ಕಾರಿದ್ದರೆ, ಶಿವಣ್ಣ ಬಳಿಯಲ್ಲಿ ಟೊಯೋಟಾ ಫಾರ್ಚುನರ್, ಮಾರುತಿ ಎರ್ಟಿಗಾ ಹಾಗೂ ವೋಲ್ವೋ ಎಸ್90 ಕಾರಿದೆ. ಇವುಗಳ ಮೌಲ್ಯ 87.70 ಲಕ್ಷ ಎಂದು ಗೀತಾ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. ಜೊತೆಗೆ ಗೀತಾ ಅವರ ಬಳಿ ಬರೋಬ್ಬರಿ 11.54 ಕೆಜಿ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದ್ದು, 30 ಕೆಜಿ ಬೆಳ್ಳಿಯೂ ಇದೆ ಎಂದು ತಿಳಿಸಿದ್ದಾರೆ.
ಇನ್ನು ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮೌಲ್ಯ ಒಟ್ಟು 3 ಕೋಟಿ ರೂ. ಕರ್ನಾಟಕದ ಹೊರತಾಗಿ ಶಿವಣ್ಣನ ಹೆಸರಲ್ಲಿ ತಮಿಳುನಾಡಿನ ಈರೋಡ್‌ನಲ್ಲಿ 3.46 ಎಕರೆ ವಿಸ್ತೀರ್ಣದ ಕೃಷಿ ಭೂಮಿಯೂ ಇದೆ. ಇದರ ಮೌಲ್ಯ 2.50 ಕೋಟಿ ರೂ. ಇನ್ನುಳಿದಂತೆ ಕೋರಮಂಗಲದಲ್ಲಿ ಗೀತಾ ಹೆಸರಲ್ಲಿ ವಾಣಿಜ್ಯ ಕಟ್ಟಡವಿದ್ದು ಇದರ ಮೌಲ್ಯ 6 ಕೋಟಿ ರೂ. ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಆಸ್ತಿಗಳ ಹೊರತಾಗಿ ಗೀತಾ ಶಿವರಾಜ್ ಕುಮಾರ್ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 57.40 ಕೋಟಿ ರೂ. ಕಾರು ಸಾಲ ಹೊಂದಿದ್ದಾರೆ ಎನ್ನಲಾಗಿದೆ. ಇತರ 57.55 ಲಕ್ಷ ರೂ. ಸಾಲವೂ ಹೊಂದಿದ್ದಾರೆ. ಶಿವರಾಜ್‌ಕುಮಾರ್ ಕೋಟಕ್ ಬ್ಯಾಂಕ್‌ನಲ್ಲಿ 3.94 ಕೋಟಿ ರೂ. ಸಾಲ ಹೊಂದಿದ್ದರೆ, ಸಿನಿಮಾಗಳಿಗಾಗಿ ಹಾಗೂ ಜಾಹೀರಾತುಗಳಿಗಾಗಿ ಬರೋಬ್ಬರಿ 13.06 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದಾರೆ.