Dream Interpretation: ಕನಸಿನಲ್ಲಿ ಯಾವ ದೇವರನ್ನು ಕಂಡರೆ ಏನು ಫಲ

Fri, 25 Jun 2021-12:10 pm,

ಭಗವಾನ್ ವಿಷ್ಣು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅದೃಷ್ಟದ ಸಂಕೇತ. ಅಂತಹ ಕನಸು ನಿಮ್ಮ ಜೀವನದಿಂದ ಸಮಸ್ಯೆಗಳು ದೂರವಾಗುವ ಸಂಕೇತವಾಗಿವೆ.

ಕನಸಿನಲ್ಲಿ ತಾಯಿ ಲಕ್ಷ್ಮಿ ಕಾಣಿಸಿಕೊಂಡರೆ ಅಪಾರ ಸಂಪತ್ತನ್ನು ತರುತ್ತದೆ. ಅಂತಹ ಕನಸು ಉದ್ಯೋಗ-ವ್ಯವಹಾರವನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ಹಣವನ್ನು ಪಡೆಯುವ ಸಂಕೇತವಾಗಿದೆ.

ಕನಸಿನಲ್ಲಿ ಭಗವಾನ್ ಹನುಮನನ್ನು (Hanuman) ಕಂಡರೆ ನಿಮ್ಮ ಶತ್ರುಗಳ ಮೇಲಿನ ವಿಜಯದ ಸಂಕೇತವಾಗಿದೆ. ಯಾವುದೇ ವಿಷಯದಲ್ಲಿ ವಿವಾದ ನಡೆಯುತ್ತಿದ್ದರೆ, ವಿಷಯ ನ್ಯಾಯಾಲಯದಲ್ಲಿದ್ದರೆ, ಅದರಲ್ಲಿ ನಿಮಗೆ ಜಯ ಸಿಗುತ್ತದೆ ಎಂದು ಇದು ಸೂಚಿಸುತ್ತದೆ.

ಮರ್ಯಾದ ಪುರುಷೋತ್ತಮ ಭಗವಾನ್ ರಾಮನನ್ನು ಕನಸಿನಲ್ಲಿ ನೋಡುವುದು ಕೆಲವು ದೊಡ್ಡ ಯಶಸ್ಸಿನ ಸಂಕೇತವಾಗಿದೆ. ವಿಶೇಷವೆಂದರೆ ಈ ಯಶಸ್ಸು ಶೀಘ್ರದಲ್ಲೇ ಲಭ್ಯವಾಗಲಿದೆ ಎನುದ್ ಇದು ಸೂಚಿಸುತ್ತದೆ.

ಇದನ್ನೂ ಓದಿ - Dreams related with Money: ಈ ವಸ್ತುಗಳು ಕನಸಲ್ಲಿ ಬಂದರೆ ಭಾರೀ ಧನ ಲಾಭದ ಮುನ್ಸೂಚನೆ

ಕನಸಿನಲ್ಲಿ ಶಿವಲಿಂಗವನ್ನು ಕಂಡರೆ ಬಹಳ ಶುಭವೆಂದು ಪರಿಗಣಿಸಲಾಗಿದೆ. ಅಂತಹ ಕನಸು ನಿಮ್ಮ ಎಲ್ಲಾ ತೊಂದರೆಗಳು ಕೊನೆಗೊಳ್ಳುವ ಸಮಯ ಬಂದಿದೆ ಎಂದು ಸೂಚಿಸುತ್ತದೆ.  

ಕನಸಿನಲ್ಲಿ ಭಗವಾನ್ ಕೃಷ್ಣನನ್ನು ಕಂಡರೆ ಪ್ರೀತಿ-ಪ್ರೇಮದ ವಿಷಯದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ - Swapna Shastra: ಬೆಳಗಿನ ಜಾವ ಈ 10 ಕನಸುಗಳು ಬಿದ್ದರೆ, ಅಪಾರ ಸಂಪತ್ತು ನಿಮ್ಮದಾಗುತ್ತೆ

ಕನಸಿನಲ್ಲಿ (Dream)  ದುರ್ಗಾಮಾತೆ ಕಾಣಿಸಿಕೊಂಡರೆ, ಕುಟುಂಬದ ಯಾವುದೇ ಸದಸ್ಯರು ದೀರ್ಘಾವಧಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಆರೋಗ್ಯದಲ್ಲಿ ಹಠಾತ್ ಚೇತರಿಕೆಗೆ ಸೂಚಿಸುತ್ತದೆ.

ವಿದ್ಯಾ ದೇವತೆಯಾದ ಸರಸ್ವತಿ ದೇವಿಯು ಕನಸಿನಲ್ಲಿ ಬರುವುದು ಶಿಕ್ಷಣ, ಪರೀಕ್ಷೆ ಮತ್ತು ಸಂದರ್ಶನದಲ್ಲಿ ಯಶಸ್ಸಿನ ಶುಭ ಸಂಕೇತವಾಗಿದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link