Dream Interpretation: ಘನತೆ, ಗೌರವ ಹೆಚ್ಚಿಸಿ ಪ್ರಮೋಷನ್ಗೆ ಕಾರಣ ಈ ರೀತಿಯ ಕನಸುಗಳು!
ಕನಸಿನಲ್ಲಿ ನೀವು ಭೂಮಿಯಿಂದ ಮೇಲಕ್ಕೆ ಏಳುತ್ತಿದ್ದರೆ ಅಥವಾ ಕನಸಿನಲ್ಲಿ ನಿಮ್ಮನ್ನು ನೀವು ಹಾರುತ್ತಿರುವುದನ್ನು ನೋಡಿದರೆ, ಅದು ಪ್ರಶಂಸೆ ಮತ್ತು ಗೌರವವನ್ನು ನೀಡುತ್ತದೆ. ಇಂತಹ ಕನಸುಗಳು ಉದ್ಯೋಗದಲ್ಲಿ ಬಡ್ತಿಯನ್ನು ಸೂಚಿಸುತ್ತವೆ.
ಕನಸಿನಲ್ಲಿ ದಿವ್ಯ ಪೀಠ ಅಥವಾ ಪೂಜಾಸ್ಥಳದ ದರ್ಶನವಾದರೆ, ಜೀವನದಲ್ಲಿ ದುಃಖ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿ ಜೀವನ ಸುಖಮಯವಾಗುತ್ತದೆ.
ಮದುವೆಯಾಗದ ಕನ್ಯೆ ಕನಸಿನಲ್ಲಿ ತನ್ನ ಮುಖದ ಮೇಲೆ ಗಡ್ಡವನ್ನು ನೋಡಿದರೆ, ಅವಳಿಗೆ ಒಳ್ಳೆಯ ಅರ್ಹ ವರನೊಂದಿಗೆ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಯಿದೆ ಎಂದರ್ಥ.
ಒಬ್ಬ ವ್ಯಕ್ತಿಗೆ ಕನಸಿನಲ್ಲಿ ಆತ ಹೊಳೆಯುತ್ತಿರುವ ಪಾದರಕ್ಷೆಯನ್ನು ಧರಿಸುತ್ತಿದ್ದಾನೆ ಎಂಬಂತೆ ಕಂಡರೆ, ಆತ ಘನತೆ ಮತ್ತು ಗೌರವವನ್ನು ಪಡೆಯುತ್ತಾನೆ. ಸಮಾಜದಲ್ಲಿ ಆತನ ಸ್ಥಾನಮಾನ ಹೆಚ್ಚಾಗಲಿದೆ .
ಕನಸಿನಲ್ಲಿ ಸಿಹಿತಿಂಡಿಗಳನ್ನು ತಯಾರಿಸುವುದನ್ನು ನೋಡಿದರೆ, ವ್ಯಕ್ತಿಯು ಸಂತೋಷ ಮತ್ತು ಸಂಪತ್ತನ್ನು ಪಡೆಯುತ್ತಾನೆ, ಆತನಿಗೆ ಸೇರಬೇಕಾದ ಹಣ ಆತನ ಬಳಿ ಬರುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)