ಬೆಳಿಗ್ಗೆ ಬಿಸಿನೀರಿಗೆ ಚಿಟಿಕೆಯಷ್ಟು ಈ ವಸ್ತು ಬೆರೆಸಿ ಕುಡಿಯಿರಿ: ನಿಮಿಷದಲ್ಲಿ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್!
ಅತಿ ಹೆಚ್ಚು ಜೀವಗಳನ್ನು ಕಿತ್ತುಕೊಳ್ಳುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಹೆಚ್ಚಿನ ಜನರಿಗೆ ಅದರ ಆರಂಭ ತಿಳಿದಿಯುವುದಿಲ್ಲ. ಆದರೆ ಈ ರೋಗವು ದೇಹವನ್ನು ಒಳಗಿನಿಂದ ನಿಷ್ಪ್ರಯೋಜಕವಾಗಿಸಿದಾಗಲೇ ಅರ್ಥವಾಗುತ್ತದೆ. ಇನ್ನು ಮಧುಮೇಹದಿಂದ ದೇಹವು ಒಣಗಲು ಪ್ರಾರಂಭಿಸುತ್ತದೆ. ಅನೇಕ ಅಂಗಗಳ ಮೇಲೂ ಪರಿಣಾಮ ಬೀರುತ್ತವೆ.
ಮಧುಮೇಹಿಗಳು ತಿನ್ನುವ ಮತ್ತು ಕುಡಿಯುವ ಆಹಾರಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಆದ್ದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಅಂದಹಾಗೆ ಮಧುಮೇಹ ರೋಗಿಗಳಿಗೆ ಕಪ್ಪು ಉಪ್ಪು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. ಅಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ.
ಕಬ್ಬಿಣ, ಸೋಡಿಯಂ ಮತ್ತು ಕ್ಯಾಲ್ಸಿಯಂನಂತಹ ಅಂಶಗಳು ಕಪ್ಪು ಉಪ್ಪಿನಲ್ಲಿ ಕಂಡುಬರುತ್ತವೆ. ಕಪ್ಪು ಉಪ್ಪನ್ನು ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹದ ಸಮಸ್ಯೆಯನ್ನು ನಿವಾರಿಸುತ್ತದೆ.
ಕಪ್ಪು ಉಪ್ಪನ್ನು ಆರೋಗ್ಯಕ್ಕೆ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಗ್ಯಾಸ್, ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳು ಬರುವುದಿಲ್ಲ.
ಕಪ್ಪು ಉಪ್ಪನ್ನು ಬೆಳಗ್ಗೆ ಬಿಸಿನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಬಿಳಿ ಉಪ್ಪಿನ ಬದಲು ಕಪ್ಪು ಉಪ್ಪನ್ನು ಸೇವಿಸುವುದರಿಂದ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕಪ್ಪು ಉಪ್ಪು ಬ್ಯಾಕ್ಟೀರಿಯಾ ವಿರೋಧಿ ಕೂಡ. ಕಪ್ಪು ಉಪ್ಪು ಸಾಮಾನ್ಯ ಉಪ್ಪಿಗಿಂತ ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುತ್ತದೆ. ಆದ್ದರಿಂದ, ಇದು ರಕ್ತದಲ್ಲಿನ ಸಕ್ಕರೆಗೆ ಪ್ರಯೋಜನಕಾರಿ.
ಕಪ್ಪು ಉಪ್ಪನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ. ಕಪ್ಪು ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕಪ್ಪು ಉಪ್ಪನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಇದು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಗ್ಯಾಸ್ʼನಿಂದ ಮುಕ್ತಿ ದೊರೆಯುತ್ತದೆ. ಅಸಿಡಿಟಿ ರೋಗಿಗಳಿಗೂ ಕಪ್ಪು ಉಪ್ಪು ಪ್ರಯೋಜನಕಾರಿಯಾಗಿದೆ.
ಸೂಚನೆ - ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.