ನಿಂಬೆ ಹಣ್ಣು ಈ ಕಾಯಿಲೆ ಇದ್ದವರಿಗೆ ವಿಷದಂತೆ... ವಾಸನೆ ಕೂಡ ತೆಗೆದುಕೊಳ್ಳಬೇಡಿ!
ನಿಂಬೆ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಪ್ರತಿದಿನ ನಿಂಬೆ ನೀರನ್ನು ಕುಡಿಯುವುದು ಹಾನಿಯನ್ನುಂಟು ಮಾಡುತ್ತದೆ.
ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಹಲ್ಲಿನ ದಂತಕವಚವನ್ನು ದುರ್ಬಲಗೊಳಿಸುತ್ತದೆ. ದಿನಾಲೂ ನಿಂಬೆ ನೀರನ್ನು ಕುಡಿಯುತ್ತಿದ್ದರೆ, ಹಲ್ಲಿನ ದಂತಕವಚದ ಸವೆತದ ಅಪಾಯವು ಹೆಚ್ಚಾಗಬಹುದು.
ನಿಂಬೆ ನೀರು ಹೊಟ್ಟೆಯಲ್ಲಿ ಆಸಿಡ್ ರಿಫ್ಲಕ್ಸ್ ಅನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು. ಹೀಗಾಗಿ ಆಸಿಡಿಟಿ ಸಮಸ್ಯೆ ಇರುವವರು ನಿಂಬೆ ನೀರನ್ನು ಕುಡಿಯುವುದು ಒಳ್ಳೆಯದಲ್ಲ.
ನಿಂಬೆ ನೀರು ಫೈಬರ್ ಸಮೃದ್ಧವಾಗಿದೆ. ಅದನ್ನು ಅತಿಯಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಈಗಾಗಲೇ ಮಲಬದ್ಧತೆ ಸಮಸ್ಯೆಯನ್ನು ಹೊಂದಿದ್ದರೆ, ನಿಂಬೆ ನೀರನ್ನು ಕುಡಿಯುವುದರಿಂದ ಆರೋಗ್ಯ ಇನ್ನಷ್ಟು ಹದಗೆಡಬಹುದು.
ನಿಂಬೆ ನೀರು ಹೊಟ್ಟೆಯ ಅಂಗಾಂಶಕ್ಕೆ ಹಾನಿ ಮಾಡುವ ಆಮ್ಲವನ್ನು ಹೊಂದಿರುತ್ತದೆ. ಹೆಚ್ಚು ನಿಂಬೆ ನೀರನ್ನು ಸೇವಿಸಿದರೆ ಅಂಗಾಂಶಕ್ಕೆ ಹಾನಿ ಆಗುವ ಅಪಾಯವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ತೊಂದರೆಗಳು ಉಂಟಾಗಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.