ಕಿಡ್ನಿ ಸ್ಟೋನ್‌ಗೆ ರಾಮಬಾಣ ಈ ಎಲೆ ... ಪ್ರತಿದಿನ ಜಗಿದು ತಿಂದರೆ ಸಾಕು ಕರಗಿ ನೋವಿಲ್ಲದಂತೆ ಹೊರ ಹೋಗುವುದು ಮೂತ್ರಪಿಂಡದ ಕಲ್ಲು!
ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಕೆಲವು ಮನೆಮದ್ದುಗಳು ಸಹಾಯಕವಾಗಬಹುದು. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.
ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುತ್ತವೆ. ಇದು ಅಸಹನೀಯ ನೋವನ್ನು ಉಂಟು ಮಾಡುತ್ತದೆ.
ತುಳಸಿ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಕಬ್ಬಿಣ, ಕ್ಲೋರೊಫಿಲ್ ಮೆಗ್ನೀಸಿಯಮ್, ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಇದ್ದು ಇದು ಕಿಡ್ನಿ ಸ್ಟೋನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಪರಿಹರಿಸಲು ತುಳಸಿ ಎಲೆಗಳನ್ನು ಬಳಸಬಹುದು. ಪ್ರತಿದಿನ 10 ರಿಂದ 12 ತುಳಸಿ ಎಲೆಗಳನ್ನು ಅರೆದು ರಸ ಹಿಂಡಿ. ಇದನ್ನು ಜೇನುತುಪ್ಪದೊಂದಿಗೆ ಸೇವಿಸಿ. ಕಿಡ್ನಿ ಸ್ಟೋನ್ ಸಮಸ್ಯೆ ದೂರವಾಗುತ್ತದೆ.
ತುಳಸಿ ಎಲೆಗಳನ್ನು ಕುದಿಸಿ ಕಷಾಯ ಮಾಡಿ. ಜೇನುತುಪ್ಪ ಬೆರೆಸಿ ಸೇವಿಸಿ. ಇದನ್ನು ನಿಯಮಿತವಾಗಿ 6 ತಿಂಗಳ ಕಾಲ ಸೇವಿಸುವುದರಿಂದ ಮೂತ್ರನಾಳದಿಂದ ಕಲ್ಲುಗಳು ಹೊರಬರುತ್ತವೆ. ಇದು ಕಲ್ಲುಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.