Driving License Online: ಇನ್ಮುಂದೆ DL,RC ಗಾಗಿ RTO ಹೋಗಬೇಕಾಗಿಲ್ಲ, ಮನೆಯಿಂದಲೇ ಮಾಡಿ ಈ 18ಕೆಲಸ

Fri, 05 Mar 2021-11:46 am,

2. ಆಧಾರ್ ಜೊತೆಗೆ DL ಹಾಗೂ RC ಜೋಡಣೆ ಅನಿವಾರ್ಯ - ವಾಹನದ ಚಾಲನಾ ಪರವಾನಗಿ (DL) ಮತ್ತು ನೋಂದಣಿ ಪ್ರಮಾಣಪತ್ರವನ್ನು (RC) ಆಧಾರ್ (Aadhaar) ಗೆ ಲಿಂಕ್ ಮಾಡಲು ಸರ್ಕಾರ ಈಗಾಗಲೇ ಹೇಳಿದೆ. ಇದರ ನಂತರ, ಆನ್‌ಲೈನ್ ಸೇವೆಗಳನ್ನು ಈಗ ಆಧಾರ್ ಪರಿಶೀಲನೆಯ ಮೂಲಕ ಪಡೆಯಬಹುದು. ಸರ್ಕಾರದ ಈ ಹೆಜ್ಜೆಯಿಂದ ಜನರು RTO ಜನಸಂದಣಿಯಿಂದ ಪರಿಹಾರ ಪಡೆಯಲಿದ್ದಾರೆ. ಆಧಾರ್-ಸಂಯೋಜಿತ ಪರಿಶೀಲನೆಯೊಂದಿಗೆ ಜನರು ಮನೆಯಲ್ಲಿ ಕುಳಿತು ಅನೇಕ ಸೇವೆಗಳನ್ನು ಪಡೆಯಲು ಇದೀಗ ಪಡೆಯಲು ಸಾಧ್ಯವಾಗಲಿದೆ.

3. ಈ 18 ಸೇವೆಗಳನ್ನು ಆನ್ಲೈನ್ ಮಾಡಲಾಗಿದೆ - ಆಧಾರ್ ಲಿಂಕ್ಡ್ ವೇರಿಫಿಕೇಶನ್ ಮೂಲಕ ನೀವು ಒಟ್ಟು 18 ಸೇವೆಗಳನ್ನು ಆನ್ಲೈನ್ ಮಾಡಲಾಗಿದೆ. ಇವುಗಳಲ್ಲಿ ಲರ್ನಿಂಗ್ DL, DL ನವೀಕರಣ(ಇದರಲ್ಲಿ ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ), ಡುಪ್ಲಿಕೇಟ್ ಡ್ರೈವಿಂಗ್ ಲೈಸನ್ಸ್, ಡ್ರೈವಿಂಗ್ ಲೈಸನ್ಸ್, RC ವಿಳಾಸ ಬದಲಾವಣೆ, ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ, ಲೈಸನ್ಸ್ ಮೂಲಕ ವಾಹನ ಶ್ರೇಣಿಯನ್ನು ಸರೆಂಡರ್ ಮಾಡುವುದು, ತಾತ್ಕಾಲಿಕ ವಾಹನ ನೋಂದಣಿ, ಸಂಪೂರ್ಣ ಬಾಡಿ ಮೂಲಕ ಸಿದ್ಧಗೊಂಡ ವಾಹನ ನೋಂದಣಿಗೆ ಅರ್ಜಿ ಸಲ್ಲಿಸುವ ಸೇವೆಗಳು ಶಾಮೀಲಾಗಿವೆ.

4. ಈ ಅಗತ್ಯಸೇವೆಗಳನ್ನು ಕೂಡ ನೀವು ಮನೆಯಿಂದಲೇ ಮಾಡಬಹುದು - ಇತರೆ ಸೇವೆಗಳಲ್ಲಿ ವಾಹನ ನೊಂದಣಿಯ ಡುಪ್ಲಿಕೆಟ್ ಪ್ರಮಾಣ ಪತ್ರ ಜಾರಿಗೊಳುಸುವುದು. ನೋಂದಣಿ ಪತ್ರಕ್ಕಾಗಿ NOC ಪಡೆಯಲು ಅರ್ಜಿ ಸಲ್ಲಿಕೆ, ಮೋಟಾರ್ ವಾಹನ ಮಾಲೀಕತ್ವ ಬದಲಾವಣೆಯ ಸೂಚನೆ. ಮೋಟಾರ್ ವಾಹನದ ಮಾಲೀಕತ್ವದ ಹಕ್ಕನ್ನು ವರ್ಗಾಯಿಸಲು ಅರ್ಜಿ ಸಲ್ಲಿಕೆ, ನೋಂದಣಿ ಪ್ರಮಾಣ ಪತ್ರದಲ್ಲಿ ವಿಳಾಸ ಬದಲಾವಣೆಯ ಸೂಚನೆ, ಮಾನ್ಯತೆ ಪಡೆದ ಡ್ರೈವಿಂಗ್ ಸ್ಕೂಲ್ ನಿಂದ ಚಲನಾ ತರಬೇತಿ ನೋಂದಣಿಗಾಗಿ ಅರ್ಜಿ ಸಲ್ಲಿಕೆ ಇತ್ಯಾದಿಗಳು ಶಾಮೀಲಾಗಿವೆ.

5. ಕೇವಲ ಆಧಾರ್ ಇದ್ದರೆ ಸಾಕು - ಇದೀಗ ಡ್ರೈವಿಂಗ್ ಲೈಸನ್ಸ್ ಹಾಗೂ ವಾಹನದ ನೋಂದಣಿ ಮಾಡಲು ಬೇರೆ ಯಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲ. ನೀವು ಕೇವಲ parivahan.gov.in ಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ನ ಪರಿಶೀಲನೆ ನಡೆಸಬೇಕು ಹಾಗೂ ಈ 18 ಸೇವೆಗಳ ಲಾಭ ಪಡೆಯಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link