Drone Prathap: ಬಿಗ್‌ ಬಾಸ್‌ ಮುಕ್ತಾಯದ ಬಳಿಕ ಎಲ್ಲಿದ್ದಾರೆ ಡ್ರೋಣ್ ಪ್ರತಾಪ್!?ದೇಶ ಬಿಟ್ಟೋದ್ರಾ?

Sat, 06 Apr 2024-3:26 pm,

ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದ ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಸದ್ಯ ಕರ್ನಾಟಕ ಹಾಗೂ ಭಾತರದಲ್ಲಿಯೂ ಇಲ್ಲ.. ಇವರು ಇದ್ದಕ್ಕಿಂತೆ ಎಲ್ಲಿ ಹೋದರು? ಎನ್ನುವ ಯಾವ ಸುಳಿವು ಸಿಗುತ್ತಾ ಇಲ್ಲ.. ಅದರಲ್ಲೂ ಖಾಸಗಿ ವಾಹಿನಿಯ ಗಿಚ್ಚ ಗಿಲಿಗಿಲಿಯಲ್ಲಿದ್ದ ಪ್ರತಾಪ್‌ ಈಗ ಅಲ್ಲಿಯೂ ಇಲ್ಲ.. ಹಾಗಾದ್ರೆ ನಿಜಕ್ಕೂ ಡ್ರೋನ್‌ ಭಾರತವನ್ನೇ ಬಿಟ್ಟು ಹೋದ್ರಾ?   

ಡ್ರೋನ್‌ ಪ್ರತಾಪ್‌ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿದವರು.. ಎಷ್ಟೋ ಸಾಧನೆ ಮಾಡಿರುವವರಿಗೆ ಸಿಗದ ಕನ್ನಡಿಗರ ಪ್ರೀತಿ ಈತನಿಗೆ ಸಿಕ್ಕಿತ್ತು.. ಅದರಲ್ಲೂ ಬಿಗ್‌ಬಾಸ್‌ ಶೋಗೆ ಬಂದ ನಂತರವಂತೂ ಜನ ಅವರನ್ನು ಮುಗ್ದ ಎಂದು ಕರೆಯಲಾರಂಭಿಸಿ ಹೆಚ್ಚು ಪ್ರೀತಿಸತೊಡಗಿದರು..   

ಇದೇ ಯಶಸ್ಸಿನ ಸಂಭ್ರಮದಲ್ಲಿ ತೇಲಾಡುತ್ತಿದ್ದ ಪ್ರತಾಪ್‌ ಅವರನ್ನು ಖಾಸಗಿವಾಹಿನಿಯವರು ರಿಯಾಲಿಟಿ ಶೋವೊಂದಕ್ಕೆ ಕರೆಸಿಕೊಂಡಿದ್ದರು.. ಈ ಹಂತದಲ್ಲಿ ಪ್ರತಾಪ್‌ ಬಗ್ಗೆ ಒಂದಷ್ಟು ಅಪಸ್ವರಗಳು ಕೇಳಿಬರೋಕೆ ಪ್ರಾರಂಭವಾದವು.. ತಾನು ಕಂಡ ಕನಸನ್ನು ಬಿಟ್ಟು ಕಾಮಿಡಿಯನ್‌ ಆಗ್ತಾ ಇದಾನೆ ಎಂದು ಹಲವರು ಬೇಸರಗೊಂಡಿದ್ದರು..   

ಇದೆಲ್ಲದರ ನಡುವೆ ಡ್ರೋನ್‌ ಪ್ರತಾಪ್‌ ಕಣ್ಮರೆಯಾಗಿದ್ದಾರೆ.. ಅವರು ಯಾವಾಗ ಬರ್ತಾರೆ? ಎಲ್ಲಿದ್ದಾರೆ? ಎನ್ನುವ ಯಾವ ಸುಳಿವನ್ನು ಗಿಚ್ಚಗಿಲಿಗಿಲಿ ರಿಯಾಲಿಟಿ ಶೋನವರು ನೀಡಿಲ್ಲ.. ಹೀಗಾಗಿ ಡ್ರೋನ್‌ ಎಲ್ಲಿದ್ದಾರೆ ಹುಡುಕಿ ಹೊರಟವರಿಗೆ ಸಿಕ್ಕ ಉತ್ತರ.. ದುಬೈ..  

 ಹೌದು ಪ್ರತಾಪ್‌ ಸದ್ಯ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ.. ಆದರೆ ಯಾಕೆ ಅವರು ಅಲ್ಲಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಮಾತ್ರ ಯಾರಿಗೂ ಗೊತ್ತಿಲ್ಲ... ಅಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ ಎನ್ನುವ ಮಾತುಗಳು ಮಾತ್ರ ಕೇಳಿಬರುತ್ತಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link